ರಾಷ್ಟ್ರೀಯ

ಶನಿ ಶಿಲೆ ಮಹಿಳಾ ಸ್ಪರ್ಶದಿಂದ ಅತ್ಯಾಚಾರ ಅಧಿಕ, ಭವಿಷ್ಯ

Pinterest LinkedIn Tumblr

swarupananda-webಹರಿದ್ವಾರ: ಶನಿಶಿಂಗ್ಣಾಪುರ ದೇವಾಲಯದಲ್ಲಿ ಕಳೆದ ನಾಲ್ಕುನೂರು ವರ್ಷಗಳಿಂದ ನಡೆಸುಕೊಂಡು ಬಂದ ಸಂಪ್ರದಾಯಕ್ಕೆ ಮಹಿಳೆಯರು ಭಂಗ ತಂದಿರುವುದರಿಂದ ಮಹಿಳೆಯರಿಗೆ ಸಂಕಷ್ಟ ಹೆಚ್ಚಾಗಲಿದ್ದು, ಇದರ ಜತೆಗೆ ಮಹಿಳೆಯರ ಅತ್ಯಾಚಾರದ ಸಂಖ್ಯೆ ಕೂಡ ಹೆಚ್ಚಾಗಲಿದೆ ಎಂದು ದ್ವಾರಕಾ ಶಾರದ ಪೀಠಾಧಿಪತಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿ ಶಿಲೆ ಮಹಿಳಾ ಸ್ಪರ್ಶದಿಂದ ದೇವಾಲಯ ಅಪವಿತ್ರವಾಗಿದೆ. ಅಷ್ಟೇ ಅಲ್ಲ ಶನಿ ಪಾಪಗಳ ಗ್ರಹವಾಗಿದ್ದು, ಮಹಿಳೆಯರು ಅವನನ್ನು ವರಿಸಿಕೊಂಡರೆ ಅಪರಾಧಗಳು ಹೆಚ್ಚಳವಾಗಲಿದೆ ಎಂದು 94ರ ಹರೆಯದ ಸ್ವರೂಪಾನಂದ ಸ್ವಾಮಿಜಿ ಭವಿಷ್ಯ ನುಡಿದಿದ್ದಾರೆ.

ಕಳೆದ ಶುಕ್ರವಾರ ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಾಲಯ ಸುಮಾರು 400 ವರ್ಷಗಳಷ್ಟು ಹಳೆಯ ಸಂಪ್ರದಾಯವನ್ನು ಅಂತ್ಯಗೊಳಿಸಿ, ಮೂರ್ತಿಗೆ ಪೂಜೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಿತ್ತು. ಮಹಿಳಾ ಸಂಘಟನೆಗಳ ನಿರಂತರ ಹೊರಾಟ ಹಾಗೂ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಈ ನಿರ್ಧಾರ ಪ್ರಕಟಿಸಿತ್ತು.

ಸಾಯಿಬಾಬ ಮುನಿಸು:

ಇನ್ನು ಮಹಾರಾಷ್ಟ್ರದ ಬರಗಾಲದ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಜನತೆ ಶಿರಡಿ ಸಾಯಿಬಾಬನನ್ನು ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದೆ ಇರುವುದರಿಂದ ಈ ಪರಿಸ್ಥಿತಿ ನಿರ್ವಣವಾಗಿದೆ. ಸಾಯಿಬಾಬ ಮುನಿಸಿಕೊಂಡಿರುವುದರಿಂದಲೇ ಬರಗಾಲ ಉಂಟಾಗಿದೆ ಎಂದು ಜನರನ್ನು ಎಚ್ಚರಿಸಿದ್ದಾರೆ.

Write A Comment