ರಾಷ್ಟ್ರೀಯ

ಜಮ್ಮುಕಾಶ್ಮೀರ : ಪ್ರಪಾತಕ್ಕೆ ಬಸ್ ಬಿದ್ದು 6 ಮಂದಿ ಸಾವು, 56 ಮಂದಿಗೆ ಗಾಯ

Pinterest LinkedIn Tumblr

jammuಶ್ರೀನಗರ,ಏ.11- ಪ್ರಯಾಣಿಕರ ಬಸ್ ಒಂದು ಪ್ರಪಾತಕ್ಕೆ ಬಿದ್ದು 6 ಜನ ಸಾವನ್ನಪ್ಪಿ 56 ಮಂದಿ ಗಾಯಗೊಂಡಿರುವ ಘಟನೆ ಜಮ್ಮುಕಾಶ್ಮೀರದ ದೋಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಜಿಲ್ಲಾ ಕೇಂದ್ರದಿಂದ ರೆಹಾಂಡ್ ಗ್ರಾಮಕ್ಕೆ ತೆರಳುತ್ತಿದ್ದ ಈ ಬಸ್‌ನಲ್ಲಿ ಒಟ್ಟು 62 ಜನ ಪ್ರಯಾಣಿಕರಿದ್ದರು ಎಂದು ದೋಡ ಜಿಲ್ಲಾಧಿಕಾರಿ ಭೂಪೀಂದರ್ ಕುಮಾರ್ ಹೇಳಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನು ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

56 ಗಾಯಾಳುಗಳನ್ನು ದೋಡಾದ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಪೈಕಿ 7 ಜನರ ಸ್ಥಿತಿ ತೀರಾ ಚಿಂತಾಜನಕವಾಗಿದೆ. ವೈದ್ಯರು ಅವರ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡಿಲ್ಲ ಎಂದು ಭೂಪೀಂದರ್ ಸಿಂಗ್ ತಿಳಿಸಿದ್ದಾರೆ.

Write A Comment