ರಾಷ್ಟ್ರೀಯ

ಪೊಲೀಸ್‌ ಗುಂಡಿಗೆ ತುಂಡಾದ ಹೈ ವೋಲ್ಟೆಜ್‌ ವಿದ್ಯುತ್‌ ತಂತಿ: 11 ಜನ ಸಾವು

Pinterest LinkedIn Tumblr

asssssamತಿನ್ಸುಕಿಯಾ (ಅಸ್ಸಾಂ): ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಹೈ ವೋಲ್ಟೆಜ್‌ ವಿದ್ಯುತ್‌ ತಂತಿ ತುಂಡಾಗಿ 11 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಪಂಗೆರಿ ಪೊಲೀಸರು ಬಂಧಿಸಿ ಠಾಣೆಯಲ್ಲಿಟ್ಟಿದ್ದರು. ಆರೋಪಿಗಳ ಮೇಲೆ ಕೋಪಗೊಂಡಿದ್ದ ಜನರು ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿ ಭಾನುವಾರ ಠಾಣೆಗೆ ನುಗ್ಗಲು ಯತ್ನಿಸಿದ್ದರು.
‘ಉದ್ರಿಕ್ತ ಗುಂಪೊಂದು ಮಚ್ಚು ಮತ್ತು ದೊಣ್ಣೆಗಳೊಂದಿಗೆ ಠಾಣೆಗೆ ನುಗ್ಗಲು ಯತ್ನಿಸಿತು. ಕೆಲವರು ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದರು. ಈ ವೇಳೆ ಉದ್ರಿಕ್ತರನ್ನು ಚದುರಿಸಲು ಗಾಳಿಯಲ್ಲಿ ಹಾರಿಸಿದ ಗುಂಡು ವಿದ್ಯುತ್‌ ತಂತಿಗೆ ತಗುಲಿ, ತಂತಿ ತುಂಡಾಗಿ ಜನರ ಮೇಲೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸ್ಥಳದಲ್ಲೇ ಒಂಬತ್ತು ಮಂದಿ ಮೃತಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂರು ದಿನಗಳ ಹಿಂದೆ ತಂದೆ, ಆತನ ಸೊಸೆ ಮತ್ತು ಮಗನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಮಗ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದ. ಬಳಿಕ ಉಳಿದಿಬ್ಬರು ಶವವಾಗಿ ಪತ್ತೆಯಾಗಿದ್ದರು.
ಉದ್ರಿಕ್ತ ಸ್ಥಳೀಯರು ಆರೋಪಿಗಳಿಗೆ ತಾವೇ ಶಿಕ್ಷೆ ನೀಡುತ್ತೇವೆ. ಅವರನ್ನು ತಮ್ಮ ವಶಕ್ಕೆ ನೀಡಿ ಎಂದು ಆಗ್ರಹಿಸಿ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ್ದರು.

Write A Comment