ರಾಷ್ಟ್ರೀಯ

ಕೊಲ್ಲಂ ಅಗ್ನಿ ದುರಂತ: ಪರಿಹಾರ ಘೋಷಿಸಿದ ಪ್ರಧಾನಿ ಮೋದಿ; ಮೃತರ ಕುಟುಂಬಕ್ಕೆ ರು.5 ಲಕ್ಷ, ಗಾಯಾಳುಗಳಿಗೆ ರು. 2 ಲಕ್ಷ ಪರಿಹಾರ ಘೋಷಣೆ

Pinterest LinkedIn Tumblr

modiweb

ನವದೆಹಲಿ: ಕೇರಳದ ಪುಟ್ಟಿಂಗಲ್ ದೇಗುಲದಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತ ಘಟನೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸಂತಾಪ ಸೂಚಿಸಿದ್ದಾರೆ.

ಘಟನೆ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೇರಳ ದೇಗುಲ ಅಗ್ನಿ ಅನಾಹುತವೊಂದು ಆಘಾತವನ್ನುಂಟು ಮಾಡಿದೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.

ಅಲ್ಲದೆ, ಶೀಘ್ರದಲ್ಲೇ ಕೇರಳ ಭೇಟಿ ನೀಡುವುದಾಗಿ ಹೇಳಿರುವ ಅವರು, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ಸಿದ್ಧವಿದೆ. ಪ್ರಕರಣ ಸಂಬಂಧ ಕೇಂದ್ರ ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಹಣವನ್ನು ಪರಿಹಾರವಾಗಿ ನೀಡಲಿದೆ ಎಂದು ಹೇಳಿದ್ದಾರೆ.

ಕೇರಳದತ್ತ ಪ್ರಧಾನಿ ಮೋದಿ ಪ್ರಯಾಣ ಆರಂಭ
ಕೇರಳ ದೇಗುಲದಲ್ಲಿ ಸಂಭವಿಸಿರುವ ಅಗ್ನಿ ದುರಂತ ಪ್ರಕರಣ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಈಗಾಗಲೇ ವಿಶೇಷ ವಿಮಾನದ ಮೂಲಕ ಪ್ರಯಾಣ ಆರಂಭಿಸಿರುವ ಮೋದಿಯವರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಕೂಡ ಸಾಥ್ ನೀಡಿದ್ದು, ಮೋದಿಯವರೊಂದಿಗೆ ನುರಿತ ವೈದ್ಯರ ತಂಡ ಪ್ರಯಾಣ ಆರಂಭಿಸಿದೆ ಎಂದು ತಿಳಿದುಬಂದಿದೆ.

Write A Comment