ರಾಷ್ಟ್ರೀಯ

ಮಹೀಂದ್ರಾ ಸಂಸ್ಥೆಯಿಂದ ಯುವೋ ಟ್ರ್ಯಾಕ್ಟರ್‌ ಮಾರುಕಟ್ಟೆಗೆ ಬಿಡುಗಡೆ

Pinterest LinkedIn Tumblr

tractorಹೈದರಾಬಾದ್,:-ಟ್ರ್ಯಾಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆ ಯುವೋ ಟ್ರ್ಯಾಕ್ಟರ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ವಾಹಕ ಡಾ.ಪವನ್ ಗೋಯಂಕ, ಹರೀಶ್ ಚೌಹಾಣ್, ಅಜಿತ್‌ಸಿಂಗ್, ರವಿ ಸಾನೆ, ವಿವೇಕ್ ಅವರು ಹೊಸ ಟ್ರಾಕ್ಟರ್ ಅನ್ನು ಅನಾವರಣಗೊಳಿಸಿದರು. 15 ಗೇರ್‌ಗಳನ್ನು ಹೊಂದಿರುವ 30 ರಿಂದ 45 ಎಚ್‌ಪಿ ಸಾಮರ್ಥ್ಯದ ಯುವೋ ಟ್ರ್ಯಾಕ್ಟರ್ 30 ರೀತಿಯ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಲಿದೆ. 32, 35, 40, 42, 45 ಎಚ್‌ಪಿ ಸಾಮರ್ಥ್ಯದ 5 ಮಾದರಿಗಳಲ್ಲಿ ಟ್ರ್ಯಾಕ್ಟರ್‌ಲಭ್ಯವಿದ್ದು, 4.99 ಲಕ್ಷದಿಂದ 6.49 ಲಕ್ಷ ಬೆಲೆ ಹೊಂದಿದೆ. 1500 ಕೆಜಿ ಭಾರ ಹೊರುವ ಸಾಮರ್ಥ್ಯ ಈ ಟ್ರ್ಯಾಕ್ಟರ್‌ಗಿದೆ.

ದೇಶದ 15 ರಾಜ್ಯಗಳ 400 ಶೋರೂಮ್‌ಗಳಲ್ಲಿ ಏಕಕಾಲಕ್ಕೆ ಟ್ರ್ಯಾಕ್ಟರ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟ್ರ್ಯಾಕ್ಟರ್‌ಗಳಿಗಿಂತ ಅತ್ಯುತ್ತಮ ತಂತ್ರಜ್ಞಾನ ಅಳವಡಿಸಿ ಇದನ್ನು ರೂಪಿಸಲಾಗಿದ್ದು, ಮಹೀಂದ್ರಾ ಸಂಸ್ಥೆ ಇದಕ್ಕಾಗಿ 300 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. 12 ರಾಜ್ಯಗಳಲ್ಲಿ 7 ಸಾವಿರ ರೈತರ ಅಭಿಪ್ರಾಯ ಪಡೆದು ಅವರ ಬೇಡಿಕೆ ಆಧರಿಸಿ ಟ್ರ್ಯಾಕ್ಟರ್ ಅಭಿವೃದ್ಧಿಗೊಳಿಸಲಾಗಿದೆ ಎಂದು ಪವನ್ ಗೋಯಂಕ ಹೇಳಿದರು.

Write A Comment