
ಘಾಜಿಯಾಬಾದ್: ಬಹುಜನ ಸಮಾಜ ಪಕ್ಷದ ರಾಜ್ಯಸಭಾ ಸದಸ್ಯ ನರೇಂದ್ರ ಕಶ್ಯಪ್ ಅವರ ಸೊಸೆಯನ್ನು ಘಾಜಿಯಾಬಾದ್ ನಲ್ಲಿ ನಿಗೂಢ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಸಂಸದನ ಸೊಸೆ ಹಿಮಾಂಶಿಯ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ನರೇಂದ್ರ ಕಶ್ಯಪ್ ಅವರ ಕುಟುಂಬ ಎರಡು ವೇಪನ್ ಗಳನ್ನು ಹೊಂದಿದ್ದು, 26 ವರ್ಷದ ಹಿಮಾಂಶಿಯನ್ನು ಗನ್ ಅಥವಾ ಪಿಸ್ತೂಲ್ ನಿಂದ ಹತ್ಯೆ ಮಾಡಲಾಗಿದೆಯೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಬೇಕಿದೆ.
ಘಾಜಿಯಾಬಾದ್ ನ ಕವಿನಗರದಲ್ಲಿರುವ ಬಿಎಸ್ ಪಿ ಸಂಸದ ಮನೆಯಲ್ಲಿ ಸೊಸೆ ಹಿಮಾಂಶಿ ಹತ್ಯೆ ನಡೆದ ಸಂದರ್ಭದಲ್ಲಿ ನರೇಂದ್ರ ಕಶ್ಯಪ್ ಅವರು ಮನೆಯಲ್ಲಿದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ.
2014ರ ಜೂನ್ ನಲ್ಲಿ ನರೇಂದ್ರ ಕಶ್ಯಪ್ ಅವರ ಪುತ್ರ ಸಾಗರ್ ಅವರೊಂದಿಗೆ ಹಿಮಾಂಶಿ ಅವರ ಮದುವೆಯಾಗಿತ್ತು.