ಮನೋರಂಜನೆ

ಸೀಲಿಂಗ್ ಫ್ಯಾನ್​ಗಳೆಲ್ಲ ಬ್ಯಾನ್ ಆಗ್ಬೇಕ್..! ಬಿಟ್ಟಿ ಪ್ರಚಾರ ಪಡೆಯಲು ಮುಂದಾಗಿದ ರಾಖಿ ಸಾವಂತ್

Pinterest LinkedIn Tumblr

rakhi-sawant

ಮುಂಬೈ: ಪ್ರತ್ಯುಷಾ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಡೋಲಿ ಬಿಂದ್ರಾ ಪ್ರಚಾರ ಪಡೆದ ಬೆನ್ನಲೇ ಇದೀಗ ಬಾಲಿವುಡ್​ನ ಕಾಂಟ್ರವರ್ಷಿಯಲ್ ಕ್ವೀನ್ ಎಂದೇ ಹೆಸರಾದ ರಾಕಿ ಸಾವಂತ್ ಬಿಟ್ಟಿ ಪ್ರಚಾರ ಪಡೆಯಲು ಮುಂದಾಗಿದ್ದಾರೆ.

ಹೌದು, ಪ್ರತ್ಯುಷಾ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ರಾಕಿ ಓಷಿವಾರ ಪೊಲೀಸ್ ಠಾಣೆಯ ಹೊರೆಗೆ ಪತ್ರಿಕಾ ಗೋಷ್ಠಿಯನ್ನು ಕರೆದು ಮಾತನಾಡಿದರು. ಈ ಸಂದರ್ಭದಲ್ಲಿ ಎರಡು ವಿಚಾರವನ್ನು ಹೊರಹಾಕಿದರು. ಮೊದಲನೆಯದಾಗಿ ಪ್ರತ್ಯುಷಾ ಬ್ಯಾನರ್ಜಿ ಸಾವಿನ ಕುರಿತು ಪ್ರತಿಕ್ರಿಯಿಸಿ, ಪ್ರತ್ಯುಷಾ ಆತ್ಮ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಪ್ರಕರಣದಲ್ಲಿ ಲಭ್ಯವಿರುವ ವಿಡಿಯೋ ಸಹ ಇದನ್ನೆ ಹೇಳುತ್ತದೆ. ಎರಡನೆಯದಾಗಿ ದೇಶದಲ್ಲಿ ನಡೆಯುತ್ತಿರುವ ಬಹುತೇಕ ಆತ್ಮಹತ್ಯೆಗಳಿಗೆ ಮನೆಯಲ್ಲಿನ ಸೀಲಿಂಗ್ ಫ್ಯಾನ್​ಗಳೇ ನೆರವಾಗುತ್ತಿವೆ. ಆದ್ದರಿಂದ ಪ್ರಧಾನ ಮಂತ್ರಿಗಳು ಈ ಕೂಡಲೇ ಸೀಲಿಂಗ್ ಫ್ಯಾನ್ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.

ಸೀಲಿಂಗ್ ಫ್ಯಾನ್​ಗೆ ಪರ್ಯಾಯವಾಗಿ ಎಸಿ ಹಾಗು ಟೇಬಲ್ ಫ್ಯಾನ್​ಗಳನ್ನು ಬಳಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ಲಂಗಳಿಗೆ ತೆರಳಿ 5,000 ಟೇಬಲ್ ಪ್ಯಾನ್​ಗಳನ್ನು ಉಚಿತವಾಗಿ ವಿತರಿಸುವುದಾಗಿ ತಿಳಿಸಿದ್ದಾರೆ. ಉದ್ಯಮಿಗಳು ಹಾಗೂ ಸರ್ಕಾರ ಬಡ ಜನತೆಗೆ ಏನು ನೀಡಿವೆ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಇಪ್ಪತ್ತು ವರ್ಷದ ಹಿಂದೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವನ್ನಪ್ಪಿದ ದಿವ್ಯಾ ಭಾರತಿ ಪ್ರಕರಣ ನೆನಪಿಸಿ, ಅವರು ಕಟ್ಟಡದ ಮೇಲಿಂದ ಹಾರಿ ಸಾವನ್ನಪ್ಪಿದ್ದರಿಂದ ಎಲ್ಲಾ ಕಟ್ಟಡಗಳನ್ನು ಬ್ಯಾನ್ ಮಾಡ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ರಾಕಿ ಸಾವಿನ ವಿಚಾರದಲ್ಲಿ ಹಾಸ್ಯ ಮಾಡಬೇಡಿ ಎಂದು ನುಡಿದ್ದಾರೆ.

Write A Comment