ರಾಷ್ಟ್ರೀಯ

ಪನಮಾ ಪ್ರಕರಣದಲ್ಲಿ ಭಾರತೀಯರ ಪಾಲಿನ ತನಿಖೆಗೆ ಸಿದ್ಧ: ಆರ್​ಬಿಐ

Pinterest LinkedIn Tumblr

panama2-webನವದೆಹಲಿ: ಪನಮಾ ಪತ್ರಗಳ ಸೋರಿಕೆಯಿಂದ ಬೆಳಕಿಗೆ ಬಂದ ಭಾರತೀಯರ ಸಾಗರದಾಚೆಗಿನ ರಹಸ್ಯ ವ್ಯವಹಾರಗಳ ಕುರಿತು ತನಿಖೆ ನಡೆಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ)ನ ಗವರ್ನರ್ ರಘುರಾಮ್ ರಾಜನ್ ತಿಳಿಸಿದರು.

ಎಲ್​ಆರ್​ಎಸ್ ಸ್ಕೀಮ್ ಅಡಿಯಲ್ಲಿ ಹಣವನ್ನು ಸಾಗರದಾಚೆಗೆ ಕೊಂಡೊಯ್ಯಲು ಅನುಮತಿಯಿದೆ. ಆದರೆ ಇವುಗಳಲ್ಲಿ ಯಾವುದು ಕಾನೂನುಬದ್ಧ ಮತ್ತು ಯಾವುದು ಕಾನೂನುಬದ್ಧವಲ್ಲ ಎನ್ನುವುದರ ಕುರಿತು ಇನ್ನಷ್ಟೇ ತನಿಖೆ ನಡೆಯಬೇಕಿದೆ ಎಂದರು.

ಸೋಮವಾರ ಪನಮಾ ಪ್ರಕರಣರಣದಲ್ಲಿ ಸುಮಾರು 500 ಭಾರತೀಯರ ಹೆಸರು ಉಲ್ಲೇಖವಾಗಿದ್ದು, ಇದರ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಚರ್ಚೆ ನಡೆಸಿದ್ದರು. ನಂತರ ಸಿಬಿಡಿಟಿ, ಆರ್​ಬಿಐ ಮತ್ತು ಹಣಕಾಸು ಜಾಗೃತಿ ದಳ ಜಂಟಿಯಾಗಿ ತನಿಖೆ ನಡೆಸಲಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದರು.

Write A Comment