ರಾಷ್ಟ್ರೀಯ

ಬಾಬಾ ರಾಮ್‌ದೇವ್ ರ ಪತಂಜಲಿ ನೂಡಲ್ಸ್ ಗುಣಮಟ್ಟವುಳ್ಳದ್ದಾಗಿಲ್ಲ !

Pinterest LinkedIn Tumblr

patanjali-noodles

ಮೀರತ್: ಬಾಬಾ ರಾಮ್‌ದೇವ್ ಅವರ ಪತಂಜಲಿ ಆಟಾ ನೂಡಲ್ಸ್ ಗುಣಮಟ್ಟವುಳ್ಳದ್ದಾಗಿಲ್ಲ ಎಂದು ಮೀರತ್ ಮೂಲದ ಆಹಾರ ಸುರಕ್ಷೆ ಮತ್ತು ಔಷಧಿ ಪ್ರಾಧಿಕಾರ (ಎಫ್‌ಎಸ್‌ಡಿ) ಹೇಳಿದೆ.

ಮ್ಯಾಗಿ ನೂಡಲ್ಸ್‌ನಲ್ಲಿರುವುದಕ್ಕಿಂತ ಅಧಿಕ ಮಟ್ಟದಲ್ಲಿ ಪತಂಜಲಿ ನೂಡಲ್ಸ್‌ನಲ್ಲಿ ಬೂದಿಯ ಅಂಶವಿದೆ ಎಂದು ತಜ್ಞರು ಹೇಳಿದ್ದಾರೆ.

ಫೆಬ್ರವರಿ 5, 2016ರಂದು ಪತಂಜಲಿ ನೂಡಲ್ಸ್, ಮ್ಯಾಗಿ ಮತ್ತು ಯಿಪ್ಪೀ ನೂಡಲ್ಸ್ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಮೂರೂ ಸ್ಯಾಂಪಲ್ ಗಳಲ್ಲಿ ಬೂದಿಯ ಅಂಶ ಜಾಸ್ತಿ ಇದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ನಿಯಮ ಪ್ರಕಾರ ಈ ಆಹಾರ ಪದಾರ್ಥಗಳಲ್ಲಿ ಶೇ.1 ರಿಂದ ಕಡಿಮೆ ಬೂದಿ ಅಂಶ ಇರಬೇಕಿತ್ತು. ಆದರೆ ಈ ನೂಡಲ್ಸ್‌ಗಳಲ್ಲಿ ಅಧಿಕ ಮಟ್ಟದಲ್ಲಿ ಬೂದಿ ಅಂಶ ಕಂಡು ಬಂದಿವೆ ಎಂದು ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ.

Write A Comment