ರಾಷ್ಟ್ರೀಯ

ನಾಯಿ ಜೀವ ಉಳಿಸಲು ಕೂಲರ್ ತರಲು ಹೋಗಿ ಹುತಾತ್ಮರಾದ 7 ಯೋಧರು

Pinterest LinkedIn Tumblr

dog

ನವದೆಹಲಿ: ಸೇನಾ ನಾಯಿಗಳು ಅತಿಯಾದ ಉಷ್ಣತೆಯಿಂದ ಬಳಲುತ್ತಿದ್ದ ಕಾರಣ ನಾಯಿಗೆ ಕೂಲರ್ ತರಲು ಹೋಗಿದ್ದ ವೇಳೆ 7 ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದರು ಎಂದು ಸೇನಾ ಮುಖ್ಯಸ್ಥ ಕೆ. ದುರ್ಗಾ ಪ್ರಸಾದ್ ಅವರು ಹೇಳಿದ್ದಾರೆ.

ಚತ್ತೀಸ್ ಗಢದ ದಾಂತೇವಾಡದಲ್ಲಿ ಇತ್ತೀಚೆಗಷ್ಟೇ ನಕ್ಸಲರ ನೆಲಬಾಂಬ್ ಸ್ಫೋಟದಲ್ಲಿ 7 ಯೋಧರು ಹುತಾತ್ಮರಾಗಿದ್ದರು.

ಇದರಂತೆ ನಕ್ಸಲರ ದಾಳಿ ಕುರಿತಂತೆ ಮಾತನಾಡಿರುವ ಅವರು, ಬೆಲ್ಜಿಯನ್ ಮೆಲಿನಾಯ್ಸ್ ಜಾತಿಗೆ ಸೇರಿದ ಸ್ನಿಫ್ಫ್ಹರ್ ನಾಯಿ ಸಿಆರ್ ಪಿಎಫ್ ತುಕಡಿಯಲ್ಲಿ ನೆಲಬಾಂಬ್ ಗಳನ್ನು ಪತ್ತೆ ಮಾಡುವ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಅತಿಯಾದ ಉಷ್ಣತೆಗೆ ಒಳಗಾಗಿದ್ದ ನಾಯಿಗಳು ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಯಿಂದ ಬಳಲುತ್ತಿದ್ದವು. ನಾಯಿಗಳ ರಕ್ಷಣೆಗೆ ಕೂಲರ್ ಅಗತ್ಯವಿತ್ತು. ಹೀಗಾಗಿ ಸೇನೆಯ 7 ಯೋಧರು ಕೂಲರ್ ತರಲು ಹೋಗಿದ್ದರು ಎಂದು ಹೇಳಿದ್ದಾರೆ.

ನಕ್ಸಲರಿಗೆ ಮಾಹಿತಿ ತಿಳಿಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದರಂತೆ ಸೇನಾ ಯೋಧರು ನಾಗರೀಕರ ಬಟ್ಟೆಗಳನ್ನು ಧರಿಸಿ, ಶಸ್ತ್ರಾಸ್ತ್ರಗಳಾವುದನ್ನು ತೆಗೆದುಕೊಳ್ಳದೇ ಹೋಗಿದ್ದರು. ನೆರ್ಲಿಯಿಂದ ಭೂಸಾರಸ್ ಘಾಟಿ ಕ್ಯಾಂಪ್ ಗೆ ತೆರಳುತ್ತಿದ್ದ ಯೋಧರು ರೆಂಗಾನಾರ್ ಕ್ಯಾಂಪ್ ನಲ್ಲಿಳಿದು ಕೂಲರ್ ತೆಗೆದುಕೊಂಡು ನಾಗರೀಕ ವಾಹನದಲ್ಲೇ ಪ್ರಯಾಣ ಮಾಡುತ್ತಿದ್ದರು. ಮಾಹಿತಿಯನ್ನು ಗುಪ್ತವಾಗಿರಿಸಲಾಗಿತ್ತು. ಆದರೆ, ಈ ಮಾಹಿತಿಯನ್ನು ಯಾರೋ ಸೋರಿಕೆ ಮಾಡಿದ್ದಾರೆ.

ಈ ಮಾಹಿತಿ ನಕ್ಸಲರಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಮಾರ್ಗದ ಮಧ್ಯೆ ನೆಲಬಾಂಬ್ ಸ್ಫೋಟಿಸಿ ಯೋಧರನ್ನು ಹತ್ಯೆ ಮಾಡಿದ್ದಾರೆ.

ಅಲ್ಲದೆ ಸ್ಫೋಟದ ನಂತರ ಯೋಧರು ಸಾವನ್ನಪ್ಪಿದ್ದಾರೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಥಳಕ್ಕೆ ಹೋಗಿ ನೋಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಮೂವರು ಯೋಧರಿಕೆ ಎಕೆ74 ರೈಫನ್ ನಿಂದ ತಲೆಗೆ ಹಾಗೂ ಭುಜಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಂದು. ಸ್ಫೋಟಕ್ಕಾಗಿ ನಕ್ಸಲರು 40-50 ಕೆಜಿ ಸ್ಳನ್ನು ಬಳಸಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಸೇನೆಯಿಂದಲೆ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ನಕ್ಸಲರು ನಮ್ಮ ಚಲನವಲನಗಳ ಮೇಲೆ ಯಾವಾಗಲೂ ನಿಗಾಇರಿಸಿರುತ್ತಾರೆ. ಆದರೆ, ಇದು ಯಾರಿಗೂ ತಿಳಿದಿರುವುದಿಲ್ಲ. ಸ್ಥಳೀಯ ನಕ್ಸಲರ ಬೆಂಬಲಿಗರಾದರೂ ನಮ್ಮನ್ನು ಗಮನಿಸಿ ನಕ್ಸಲರಿಗೆ ಮಾಹಿತಿ ನೀಡಿರಬಹುದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ನಕ್ಸಲ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಬಾಂಬ್ ಪತ್ತೆ ಮಾಡುವುದರಲ್ಲಿ ಪರಿಣತಿಯನ್ನು ಹೊಂದಿರುತ್ತಾರೆ. ಆದರೆ, ಈ ಘಟನೆಯಲ್ಲಿ ನಕ್ಸಲರು ಸುರಂಗ ಕೊರೆದು ಬಾಂಬ್ ಇರಿಸಿದ್ದರಿಂದ ಯೋಧರಿಗೆ ಈ ಬಗ್ಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

Write A Comment