ರಾಷ್ಟ್ರೀಯ

ವೆಂಟೋ ಮಾದರಿಯ 3 ,877 ಕಾರುಗಳನ್ನು ವಾಪಸ್ ಪಡೆಯಲಿರುವ ವೋಕ್ಸ್ ವ್ಯಾಗನ್ ಇಂಡಿಯಾ

Pinterest LinkedIn Tumblr

ventoಚೆನ್ನೈ: ಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ಸಂಸ್ಥೆ ವೆಂಟೋ ಮಾದರಿಯ (ಡಿಸೇಲ್) 3 ,877 ಕಾರುಗಳನ್ನು ಗ್ರಾಹಕರಿಂದ ವಾಪಸ್ ಪಡೆಯಲಿದೆ.
ಎಆರ್ ಎ ಐ ನಿಂದ ನಡೆಸಿದ ತಪಾಸಣೆಯಲ್ಲಿ ವೆಂಟೋ ಮಾದರಿಯ ಕಾರುಗಳಲ್ಲಿ ಕಾರ್ಬನ್ ಮಾನಾಕ್ಸೈಡ್(ಸಿಒ) ಹೊರಸೂಸುವಿಕೆ ಸ್ಥಿರವಾಗಿರದ ಕಾರಣ ವೋಕ್ಸ್ ವ್ಯಾಗನ್ ಈ ನಿರ್ಧಾರ ಕೈಗೊಂಡಿದೆ. ವೋಕ್ಸ್ ವ್ಯಾಗನ್ ಸಂಸ್ಥೆ ಅತಿ ದೊಡ್ಡ ಮಾಲಿನ್ಯ ಮೋಸ ಮಾಡಿರುವುದು ಬಯಲಿಗೆ ಬಂದಿತ್ತು. ಈ ಪ್ರಕರಣ ಬಯಲಾದ ಬೆನ್ನಲ್ಲೇ ವೆಂಟೋ ಮಾದರಿಯ ಕಾರುಗಳಲ್ಲಿ ಇಂಗಾಲ ಮಾನಾಕ್ಸೈಡ್ ಹೊರ ಸೂಸುವಿಕೆ ಅಸ್ಥಿರವಾಗಿರುವುದು ಬೆಳಕಿಗೆ ಬಂದಿದೆ.
ವೆಂಟೋ ಮಾದರಿಯ ಕಾರುಗಳಲ್ಲಿ ಕಾಣಿಸಿಕೊಂಡಿರುವ ದೋಷವನ್ನು ಸರಿಪಡಿಸಲು ಕ್ರಮ ಕೈಗೊಂಡು, ಎಆರ್ ಎಐ ಗೆ ತಾಂತ್ರಿಕ ದೋಷ ಪರಿಹಾರದ ಕುರಿತು ಮಾಹಿತಿ ನೀಡುತ್ತೇವೆ, ಎಆರ್ ಎ ಐ ಯಿಂದ ಅನುಮತಿ ಪಡೆದ ನಂತರ ವೆಂಟೋ ಮಾದರಿಯ ಕಾರುಗಳ ಉತ್ಪಾದನೆಯನ್ನು ಪುನಾರಂಭ ಮಾಡಲಿದೆ ಎಂದು ವೋಕ್ಸ್ ವ್ಯಾಗನ್ ಸಂಸ್ಥೆ ಹೇಳಿದೆ. ಈಗಾಗಲೇ ಗ್ರಾಹಕರ ಬಳಿ ಇರುವ ವಾಹನಗಳನ್ನು ವಾಪಸ್ ಪಡೆದು ತಾಂತ್ರಿಕ ದೋಷಗಳನ್ನು ಸರಿಪಡಿಸಲಿದೆ ಎಂದು ವೋಕ್ಸ್ ವ್ಯಾಗನ್ ಮಾಹಿತಿ ನೀಡಿದೆ.

Write A Comment