ರಾಷ್ಟ್ರೀಯ

ಫ್ಲೈ ಓವರ್ ಕುಸಿತ: ಒಂದೆಡೆ ಗಾಯಾಳುಗಳ ಸಂಕಟ; ಮತ್ತೊಂದೆಡೆ ಸೆಲ್ಫೀಗಾಗಿ ಚೆಲ್ಲಾಟ

Pinterest LinkedIn Tumblr

Kolkataಕೋಲ್ಕತಾ: ಕೋಲ್ಕತಾದಲ್ಲಿ ನಿರ್ಮಾಣಹಂಟದಲ್ಲಿದ್ದ ಮೇಲ್ಸೇತುವೆ ಕುಸಿದಿದ್ದು, ಹಲವರು ಸಂತ್ರಸ್ತರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಹೃದಯವಿದ್ರಾವಕ ಘಟನೆಯ ನಡುವೆ ಸೆಲ್ಫಿ ಹುಚ್ಚು ಹೃದಯಹೀನತೆಯನ್ನು ಮೆರೆದಿದೆ!.
ಸೇತುವೆ ಕುಸಿದುಬಿದ್ದಿರುವ ಪರಿಣಾಮ ಗಾಯಗೊಂಡಿರುವವರೊಂದಿಗೆ ಕೆಲವು ಯುವಕರ ಗುಂಪು ಸೆಲ್ಫಿ ತೆಗೆಸಿಕೊಳ್ಳಲು ಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವಿವೇಕಾನಂದ ರಸ್ತೆಯಲ್ಲಿ ಕುಸಿದುಬಿದ್ದ ಮೇಲ್ಸೇತುವೆಯಡಿ ಸಿಲುಕಿದವರನ್ನು ಹೊರತೆಗೆಯುತ್ತಿರುವ ದೃಶ್ಯ ಒಂದೆಡೆಯಾದರೆ, ಅವರಿಗೆ ಸಹಾಯ ಮಾಡಬೇಕಿದ್ದ ಯುವಕರ ಗುಂಪೊಂದು ಮುರಿದ ಪಿಲ್ಲರ್ ಗಳ ಮೇಲೆ ಕುಳಿತು ಕೆಲವು ಯುವಕರು ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದರಲ್ಲದೇ ಚೆಂದದ ಸೆಳ್ಫಿಗಾಗಿ ತಮ್ಮ ತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದರು.
ಸೆಲ್ಫಿ ತೆಗೆಯುವ ಭರದಲ್ಲಿದ್ದ ಯುವಕರು, ಗಾಯಾಳುಗಳನ್ನು ಸಾಗಿಸುವ ಆಂಬುಲೆನ್ಸ್ ಗಳಿಗೆ ಅಡ್ಡ ನಿಂತಿದ್ದರಿಂದ ಪೊಲೀಸರು ಅಕ್ಷರಸಹ ಅವರನ್ನು ಅಂಬುಲೆನ್ಸ್ ಗಳ ಎದುರಿನಿಂದ ಎಳೆದು ಬಾಡಿಗೆ ಸರಿಸಬೇಕಾಯಿತು. ಕೋಲ್ಕತದಾಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದುಬಿದ್ದ ಪರಿಣಾಮ ವಾಹನಗಳು ಕುಸಿದ ಮೇಲ್ಸೇತುವೆ ಅಡಿಯಲ್ಲಿ ಸಿಲುಕಿ 24 ಜನ ಸಾವನ್ನಪ್ಪಿದ್ದರೆ, 90 ಜನರು ಗಾಯಗೊಂಡಿದ್ದಾರೆ.

Write A Comment