ಅಂತರಾಷ್ಟ್ರೀಯ

ಭಯೋತ್ಪಾದನೆ ಎದುರು ಭಾರತ ಎಂದಿಗೂ ತಲೆಬಾಗುವುದಿಲ್ಲ: ಮೋದಿ

Pinterest LinkedIn Tumblr

mo

ಬ್ರಸೆಲ್ಸ್: ಬ್ರಸೆಲ್ಸ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಸೆಲ್ಸ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದು, ಭಾರತ ಎಂದಿಗೂ ಉಗ್ರವಾದದ ಎದುರು ತಲೆ ಬಾಗುವುದಿಲ್ಲ ಎಂದಿದ್ದಾರೆ.

ರಾಜತಾಂತ್ರಿಕ ಮಾತುಕತೆ ನಡೆಸಿದ ಬಳಿಕ, ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿರುದ್ಧ ಇಡಿ ವಿಶ್ವವೇ ಒಗ್ಗೂಡಬೇಕಿದೆ, ಮಾನವೀಯತೆಯಲ್ಲಿ ನಂಬಿಕೆಯುಳ್ಳವರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ. ಮಾನವಿಯತೆಗೆ ಮುಳುವಾಗಿರುವ ಭಯೋತ್ಪಾದನೆ ಎದುರು ಭಾರತ ತಲೆ ಬಾಗಿಲ್ಲ, ಬಾಗಿಸುವುದೂ ಇಲ್ಲ ಎಂದು ಮೋದಿ ತಿಳಿಸಿದ್ದಾರೆ.

Write A Comment