ಮನೋರಂಜನೆ

ಯಾವಾಗ ನನ್ನ ಮದುವೆ?, ಜ್ಯೋತಿಷಿಗಳ ಮೊರೆ ಹೋದ ಕಂಗನಾ

Pinterest LinkedIn Tumblr

Kangna Ranaut

ಹಿಮಾಚಲ ಪ್ರದೇಶ: ತನ್ನ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕಂಗನಾ ರಣಾವತ್ ಗೆ ಈಗ ಮದುವೆ ಬಗ್ಗೆ ಚಿಂತೆ ಆರಂಭವಾಗಿದೆಯಂತೆ.

ಈ ಹಿನ್ನೆಲೆಯಲ್ಲಿ ಕಂಗನಾ ಹಿಮಾಚಲ ಪ್ರದೇಶದ ಜೋಗಿಂದರ್‌ ನಗರ್‌ ನಲ್ಲಿರುವ ಲೇಖ್ ರಾಜ್ ಶರ್ಮಾ ಎಂಬ ಜ್ಯೋತಿಷಿಯನ್ನು ಭೇಟಿ ಮಾಡಿ ತಮ್ಮ ವಿವಾಹ ಸಂಬಂಧ ಪ್ರಶ್ನೆಗಳನ್ನು ಕೇಳಿದ್ದಾರಂತೆ. ನಾನು ಯಾವಾಗ ಮದುವೆಯಾಗುತ್ತೇನೆ, ನನ್ನ ತಾಯಿಯ ಆರೋಗ್ಯ ಯಾವಾಗ ಸುಧಾರಿಸುತ್ತದೆ ಎಂಬೆಲ್ಲ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದ್ದಾಳೆ.

ಹೃತಿಕ್‌ ರೋಷನ್‌ ಜೊತೆಗಿನ ಹಳೆಯ ಪ್ರೇಮ ಪ್ರಕರಣದ ಸಂಬಂಧ ಕೋರ್ಟ್‌ ಮೆಟ್ಟಿಲೇರಿರುವ ನಟಿ ಕಂಗನಾ ತನ್ನ ಮದುವೆ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಜ್ಯೋತಿಷಿಗಳ ಮೊರೆ ಹೋಗಿದ್ದಾರಂತೆ.

Write A Comment