ರಾಷ್ಟ್ರೀಯ

ನನ್ನ ಪತಿಶರೀರಕ್ಕೆ ಅಧಿಕಾರಿಗಳು ಅಗೌರವವನ್ನು ಸೂಚಿಸಿದ್ದು, ನಾಯಿಯಂತೆ ನಡೆಸಿಕೊಂಡಿದ್ದಾರೆ: ಮಡಿದ ಯೋಧನ ಪತ್ನಿ

Pinterest LinkedIn Tumblr

crpf-jawan

ಆಲಪುಳ (ಕೇರಳ): ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದ ನನ್ನ ಪತಿಯ ಪಾರ್ಥೀವ ಶರೀರಕ್ಕೆ ಅಧಿಕಾರಿಗಳು ಅಗೌರವವನ್ನು ಸೂಚಿಸಿದ್ದು, ನಾಯಿಯಂತೆ ನಡೆಸಿಕೊಂಡಿದ್ದಾರೆಂದು ಮಡಿದ ಯೋಧನ ಪತ್ನಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕೇರಳ ಮೂಲದ ಅನಿಲ್ ಅಚನ್ಕುಂಜು (33) ಸಿಆರ್ ಪಿಎಫ್ ಯೋಧರಾಗಿದ್ದು, ಮಾರ್ಚ್ 24 ರಂದು ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದರು. ನಂತರ ಯೋಧನ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ನೀಡಿದ್ದ ಅಧಿಕಾರಿಗಳು, ಪಾರ್ಥೀವ ಶರೀರಕ್ಕೆ ಬಟ್ಟೆಯನ್ನು ಹೊದಿಸದೆ ಪ್ಲಾಸ್ಟಿಕ್ ಕವರ್ ನ್ನು ಹಾಕುವ ಮೂಲಕ ಅಗೌರವವನ್ನು ಸೂಚಿಸಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯ ಹಾಗೂ ಅಗೌರವ ವರ್ತನೆ ಇದೀಗ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಆರ್ ಪಿಎಫ್ ಅಧಿಕಾರಿಗಳು ಹಾಗೂ ಗೃಹ ಸಚಿವಾಲಯದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಮಡಿದ ಯೋಧನ ಪತ್ನಿ ಲಿನಿ ಅವರು, ನನ್ನ ಪತಿಯ ಸ್ಥಾನದಲ್ಲಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರೆ ಅವರಿಗೆ ಈ ರೀತಿಯಾಗಿ ನಡೆಸಿಕೊಳ್ಳುತ್ತಿದ್ದರೇ? ನನ್ನ ಪತಿ ಯೋಧನಾಗಿರುವ ಕಾರಣ ಅಧಿಕಾರಿಗಳು ಈ ರೀತಿಯಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಡಿದ ಯೋಧ ನನ್ನ ಕ್ಷೇತ್ರದವರಾಗಿದ್ದು, ನನಗೆ ಗೊತ್ತಿರುವ ವ್ಯಕ್ತಿಯಾಗಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಲಿದೆ. ಇನ್ನು ಪ್ರಕರಣ ಸಂಬಂಧ ಗೃಹ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆಂದು ಕೇರಳ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತಾಳ ಅವರು ಹೇಳಿದ್ದಾರೆ.

Write A Comment