ರಾಷ್ಟ್ರೀಯ

ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವಂತೆ ವಿದ್ಯಾರ್ಥಿಗಳ ಮೇಲೆ ಹಲ್ಲೆ: 5 ಬಂಧನ

Pinterest LinkedIn Tumblr

arrested

ನವದೆಹಲಿ: ಭಾರತ್ ಮಾತಾ ಕಿ ಜೈ ಘೋಷಣೆ ಕೂಗವಂತೆ ಆಗ್ರಹಿಸಿ ಮೂವರು ಮದರಸಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳಿಂದ ಪಡೆದ ಹೇಳಿಕೆಯನ್ನು ಆಧರಿಸಿ ಇದೀಗ 5 ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧನಕ್ಕೊಳಗಾಗಿರುವ ಐವರು ವಿದ್ಯಾರ್ಥಿಗಳಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ವಿಕ್ರಮ್ ಜಿತ್ ಸಿಂಗ್ ಹೇಳಿದ್ದಾರೆ.

ಈ ಹಿಂದೆ ಹಲ್ಲೆಗೊಳಗಾದ ಮದರಸಾ ವಿದ್ಯಾರ್ಥಿಗಳು ಶನಿವಾರ ಪಾರ್ಕ್ ಒಂದರ ಸಮೀಪ ಹೋಗಿದ್ದಾಗ ಗುಂಪೊಂದು ಬಂದು ನಮ್ಮನ್ನು ಥಳಿಸಿ ಹಿಂಸೆ ನೀಡಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗವಂತೆ ಆಗ್ರಹಿಸಿತ್ತು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿತ್ತು ಆರೋಪವನ್ನು ವ್ಯಕ್ತಪಡಿಸಿದ್ದರು. ಆರೋಪ ವ್ಯಕ್ತಪಡಿಸಿದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮೂವರ ಪೈಕಿ ಓರ್ವ ವಿದ್ಯಾರ್ಥಿಯ ಕೈ ಮೂಳೆ ಮುರಿದಿದೆ.

Write A Comment