ಮನೋರಂಜನೆ

ಗಂಡು ಮಗುವಿಗೆ ಜನ್ಮ ನೀಡಿದ ಸಲ್ಮಾನ್ ತಂಗಿ ಅರ್ಪಿತಾ

Pinterest LinkedIn Tumblr

333

ಮುಂಬೈ: ಆಯೂಷ್ ಶರ್ಮಾರನ್ನು ವರಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬುಧವಾರ ಬೆಳಗ್ಗೆ ಮುಂಬೈನ ಸಿಟಿ ಆಸ್ಪತ್ರೆಯಲ್ಲಿ ಅರ್ಪಿತಾ ಖಾನ್ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಅಯಿಲ್ ಎಂದು ಹೆಸರಿಡಲಾಗಿದೆ.

ಮಗುವಾದ ಶುಭ ಸುದ್ದಿಯನ್ನು ಆಯೂಷ್ ಶರ್ಮಾ ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿ ‘ನಮ್ಮ ರಾಜಕುಮಾರ ಬಂದ’ ಎಂದು ಬರೆದುಕೊಂಡಿದ್ದಾರೆ.

ಅಯಿಲ್ ಆಗಮನದಿಂದ ಸಲ್ಮಾನ್ ಖಾನ್ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ.

2014ರ ನವೆಂಬರ್ 18ರಂದು ಹೈದರಾಬಾದ್ ನ ಫಲಕ್ನುಮಾ ಪ್ಯಾಲೇಸ್ ನಲ್ಲಿ ಅರ್ಪಿತಾ ಖಾನ್ ಹಾಗೂ ಆಯೂಷ್ ಶರ್ಮಾ ಸಪ್ತಪದಿ ತುಳಿದಿದ್ದರು.

Write A Comment