ರಾಷ್ಟ್ರೀಯ

‘ಹೋಳಿ ಮಹಿಳಾ ವಿರೋಧಿ ಹಬ್ಬ’; ಜೆಎನ್‌ಯು ಕ್ಯಾಂಪಸ್‌ನಲ್ಲಿ ಹೊಸ ಪೋಸ್ಟರ್

Pinterest LinkedIn Tumblr

kanhaiya-kumar3

ನವದೆಹಲಿ : ಹೋಳಿಯು ಮಹಿಳಾ ವಿರೋಧಿ ಹಬ್ಬ ಎಂಬ ಹೇಳಿಕೆಯುಳ್ಳ ಭಿತ್ತಿಪತ್ರವು ಜವಹರಲಾಲ್‌ ನೆಹರೂ ವಿವಿ ಆವರಣದಲ್ಲಿ ಕಂಡುಬಂದಿದೆ. ಸಂಭ್ರಮಾಚರಣೆ ಹೆಸರಲ್ಲಿ ದಲಿತ ಮಹಿಳೆಯರನ್ನು ಇದು ಲೈಂಗಿಕವಾಗಿ ನಿಂದಿಸುತ್ತದೆ ಎಂದು ಹೇಳಲಾಗಿದೆ.

ಭಿತ್ತಿಪತ್ರಗಳನ್ನು ವಿವಿ ಅವರಣದ ಹೋಟೆಲ್, ಮಾರುಕಟ್ಟೆ, ಶಾಲೆಯ ಗೋಡೆಗಳ ಮೇಲೆ ಅಂಟಿಸಲಾಗಿದೆ. ಸಾಮಾಜಿಕ ತಾಣಗಳನ್ನೂ ಇದು ಆವರಿಸಿದೆ. ಹೋಳಿ ಆಚರಣೆ ಹೆಣ್ತನದ ವಿರುದ್ಧ ವಾಗಿದೆ ಎಂದೂ ಭಿತ್ತಿಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಫ್ಲೇಮ್ಸ್ ಆಫ್‌ ರೆಸಿಸ್ಟೆನ್ಸ್ ಎಂಬ ಹೆಸರು ಪೋಸ್ಟರ್‌ನಲ್ಲಿದೆ. ಆದರೆ ಇಂತಹ ಸಂಘಟನೆ ಹೆಸರನ್ನು ತಾವು ಕೇಳಿಯೇ ಇಲ್ಲ. ಬಹುಶಃ ಇದು ಹೊಸ ಗುಂಪಿರಬೇಕು ಎಂದು ಜೆಎನ್‌ಯು ಎಸ್‌ಯು ಕಚೇರಿ ಅಧಿಕಾರಿ ಹೇಳಿದ್ದಾರೆ.

ಸಿಖ್‌ ಗಲಭೆ: ಕನ್ಹಯ್ಯಾ ಹೇಳಿಕೆಗೆ ವಿರೋಧ
ನವದೆಹಲಿ: 2002ರ ಗುಜರಾತ್‌ ಗಲಭೆ ಮತ್ತು 1984ರ ಸಿಖ್‌ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

‘ಸಿಖ್‌ ವಿರೋಧಿ ಗಲಭೆಯು ಆಕ್ರೋಶಭರಿತ ಜನರ ತಕ್ಷಣದ ಪ್ರತಿಕ್ರಿಯೆಯಾಗಿತ್ತು. ಆದರೆ ಗುಜರಾತ್‌ ಗಲಭೆ ಸರ್ಕಾರ ನಡೆಸಿದ್ದ ಹತ್ಯಾ ಕಾಂಡ’ ಎಂದು ಕನ್ಹಯ್ಯಾ ಸೋಮವಾರ ಹೇಳಿದ್ದರು.

ಕನ್ಹಯ್ಯಾ ಹೇಳಿಕೆಗೆ ಜೆಎನ್‌ಯು ವಿದ್ಯಾರ್ಥಿ ಸಂಘದ ಇತರ ಪದಾಧಿ ಕಾರಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ‘1984 ಮತ್ತು 2002ರಲ್ಲಿ ನಡೆದ ಗಲಭೆಗಳು ಸರ್ಕಾರದ ಬೆಂಬಲದೊಂದಿಗೆ ನಡೆದ ಹಿಂಸಾಚಾರವಾಗಿದ್ದವು. ಇವೆರಡು ಘಟನೆಗಳ ನಡುವೆ ವ್ಯತ್ಯಾಸವನ್ನು ಕಾಣಬಾರದು’ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್‌ ಶೋರಾ ಹೇಳಿದ್ದಾರೆ.

‘ಆದರೆ ಕನ್ಹಯ್ಯಾ ಇಂತಹ ಹೇಳಿಕೆ ನೀಡುವಾಗ ನಾನು ಸ್ಥಳದಲ್ಲಿ ರಲಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈ ಸಲಾಗಿದೆಯೇ ಎಂಬುದು ತಿಳಿಯದು’ ಎಂದಿದ್ದಾರೆ.
‘ಕನ್ಹಯ್ಯಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಹಲವು ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ದೂರವಾಣಿ ಕರೆ ಮಾಡಿ ನನ್ನ ಅಭಿಪ್ರಾಯ ಕೇಳಿದ್ದಾರೆ’ ಎಂದು ಶೆಹ್ಲಾ ನುಡಿದಿದ್ದಾರೆ.

ಸಿಖ್‌ ವಿರೋಧಿ ಗಲಭೆ ಯಲ್ಲಿ ಕಾಂಗ್ರೆಸ್‌ ಸರ್ಕಾರದ ಪಾತ್ರ ಇಲ್ಲ ಎಂಬುದನ್ನು ತೋರಿಸಲು ಕನ್ಹಯ್ಯಾ ಅವರು ಪ್ರಯತ್ನಿಸಿದ್ದು ನನಗೆ ಅಚ್ಚರಿ ಉಂಟು ಮಾಡಿದೆ’ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐ ಎಸ್‌ಎ) ಅಧ್ಯಕ್ಷೆ ಸುಚೇತಾ ಡೇ ಪ್ರತಿಕ್ರಿಯಿಸಿದ್ದಾರೆ. ‘1984ರ ಗಲಭೆಗೆ ಜನರ ಆಕ್ರೋಶವೇ ಕಾರಣ ಎನ್ನುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

Write A Comment