ರಾಷ್ಟ್ರೀಯ

ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರಶ್ನಿಸಲು ಮುಂದಾದ ತಂದೆಯ ಹತ್ಯೆ

Pinterest LinkedIn Tumblr

rape-new

ಮುಜಾಫರನಗರ: ವಿವಾಹಿತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನ್ನು ತಡೆಯಲು ಮುಂದಾದ ತಂದೆಯನ್ನು ಆರೋಪಿ ಬಡಿದು ಕೊಂದಿರುವ ಘಟನೆ ಮುಜಾಫರನಗರದಲ್ಲಿ ನಡೆದಿದೆ.

ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬ 22 ವರ್ಷದ ತಮ್ಮ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಈ ವೇಳೆ ತಡೆಯಲು ಮುಂದಾದ ಆಕೆಯ ತಂದೆಯನ್ನು ಬಡಿದು ಕೊಂದಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಗೈಘಾಟ್ ಪೊಲೀಸರು ಆರೋಪಿ ಸೇರಿದಂತೆ ಐವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಭಾನುವಾರ ಮಧ್ಯಾಹ್ನ ತವರಿಗೆ ಬಂದ ಮಗಳು ಅದೇ ಗ್ರಾಮದ ಪ್ರಭಾವಿ ವ್ಯಕ್ತಿ ಸಂಜಯ್ ಯಾದವ್ ಅವರ ಜಮೀನಿನಲ್ಲಿ ಹುಲ್ಲನ್ನು ಕೂಯ್ಯಲು ಹೋಗಿದ್ದಾಳೆ. ಈ ವೇಳೆ ಸಂಜಯ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅತ್ಯಾಚಾರಿಯಿಂದ ತಪ್ಪಿಸಿಕೊಂಡ ಆಕೆ ಮನೆಗೆ ಬಂದು ತಂದೆಗೆ ವಿಷಯ ತಿಳಿಸಿದ್ದಾಳೆ.

50 ವರ್ಷದ ನಾಗೋ ರಾಯ್ ಅವರು ಸಂಜಯ್ ಯಾದವ್ ಮನೆಗೆ ಬಂದು ವಿಚಾರಿಸಿ ಪೊಲೀಸ್ ಕಂಪ್ಲೆಂಟ್ ಕೊಡುವುದಾಗಿ ಬೆದರಿಸಿದ್ದಾರೆ. ಇದರಿಂದ ಕೋಪಗೊಂಡ ಸಂಜಯ್ ಸಂಬಂಧಿಕರಾದ ದುಖಾ ರೈ, ಜೈರಾಮ್ ರಾಯ್, ದಿಲೀಪ್ ರಾಯ್ ಮತ್ತು ವೀನಾ ದೇವಿಯೊಂದಿಗೆ ನಗೋ ರಾಯ್ ಮನೆಗೆ ಹೋಗಿ ಆತನ ಮೇಲೆ ಹಲ್ಲೆ ಮಾಡಿದ್ದು, ನಗೋ ರಾಯ್ ಮೃತಪಟ್ಟಿದ್ದಾರೆ.

ಪ್ರಕರಣ ಕುರಿತಂತೆ ಸಂತ್ರಸ್ತೆ ತಮ್ಮ ತಂದೆಯ ಮೇಲೆ ಸಂಜಯ್ ಯಾದವ್ ಹಾಗೂ ಅವರ ಸಂಬಂಧಿಕರು ಕಬ್ಬಿಣದ ಸರಳು ಹಾಗೂ ಇಟ್ಟಿಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

Write A Comment