ಮನೋರಂಜನೆ

ಅನುಷ್ಕಾ ಮೇಲೆ ಗೂಬೆ ಕೂರಿಸುವವರಿಗೆ ನಾಚಿಕೆಯಾಗಬೇಕು: ಕೊಹ್ಲಿ

Pinterest LinkedIn Tumblr

kohli-anushka

ನವದೆಹಲಿ: ನಿನ್ನೆ ಆಸಿಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಇಂದು ತಮ್ಮ ಪ್ರೇಯಸಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪರ ಬ್ಯಾಟಿಂಗ್ ಮಾಡುವ ಮೂಲಕ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಅನುಷ್ಕಾ ಶರ್ಮಾ ಕುರಿತಂತೆ ಟ್ವೀಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೊಹ್ಲಿ, ಅನಗತ್ಯವಾಗಿ ಅವಳ ಮೇಲೆ ಗೂಬೆ ಕೂರಿಸುವವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ಅನುಷ್ಕಾ ನನಗೆ ಧನಾತ್ಮಕವಾಗಿ ಪ್ರೇರಣೆ ನೀಡುತ್ತಾಳೆ. ಒಳ್ಳೆಯ ವಿಚಾರಕ್ಕೆ ಅವಳು ಯಾವತ್ತು ನನ್ನನ್ನು ಪ್ರೋತ್ಸಾಹಿಸುತ್ತಾಳೆ. ಅನಗತ್ಯವಾಗಿ ಅನುಷ್ಕಾ ಹೆಸರನ್ನು ಎಳೆದುತರುವವರಿಗೆ ನಾಚಿಕೆಯಾಗಬೇಕು ಎಂದು ವಿರಾಟ್ ಕೊಹ್ಲಿ ಟ್ವಿಟ್ ಮಾಡಿದ್ದಾರೆ.

Write A Comment