ರಾಷ್ಟ್ರೀಯ

ಛೋಟಾ ರಾಜನ್ ವಿರುದ್ಧ ಎರಡು ಪ್ರಕರಣ ದಾಖಲಿಸಿ ಸಿಬಿಐ

Pinterest LinkedIn Tumblr

chota

ನವದೆಹಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ಛೋಟಾ ರಾಜನ್‌ ವಿರುದ್ಧ ಸಿಬಿಐ ಮತ್ತೆ ಎರಡು ಪ್ರಕರಣಗಳನ್ನು ದಾಖಲಿಸಿದೆ.

ಒಂದು ವಿರೋಧಿ ಬಣದ ಮೇಲೆ ನಡೆಸಿದ್ದ ಭೆಂಡಿ ಬಜಾರ್‌ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದ್ದರೆ ಮತ್ತೊಂದು ಮುಂಬೈ ಉದ್ಯಮಿ ಉದ್ಯಮಿಯ ಹತ್ಯೆ ಯತ್ನಕ್ಕೆ ಸಂಬಂಧಿಸಿದ್ದಾಗಿದೆ. 2010 ರ ಫೆಬ್ರವರಿಯಲ್ಲಿ ನಡೆದಿದ್ದ ಶೂಟ್ ಔಟ್ ಪ್ರಕರಣದಲ್ಲಿ ಶಕೀಲ್ ಮೊಡಾಕ್ ಮತ್ತು ಇರ್ಫಾನ್ ಖುರೇಷಿ ಸಾವನ್ನಪ್ಪಿದ್ದರು ಹಾಗೂ ಆಸಿಫ್ ಎಂಬಾತ ಮೃತಪಟ್ಟಿದ್ದ.

ಈ ಪ್ರಕರಣದಲ್ಲಿ ಛೋಟಾ ರಾಜನ್ ಸೇರಿದಂತೆ ಇನ್ನೂ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಛೋಟಾ ರಾಜನ್ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣ ಮುಂಬೈ ನ ಉದ್ಯಮಿ ಬಿಆರ್ ಶೆಟ್ಟಿ ಹತ್ಯೆಗೆ ಯತ್ನಿಸಿದ್ದಾಗಿದೆ. ಅಕ್ಟೋಬರ್ 2012 ರಲ್ಲಿ ಉದ್ಯಮಿ ಬಿಆರ್ ಶೆಟ್ಟಿ ಅವರನ್ನು ಹತ್ಯೆ ಮಾಡಲು ಯತ್ನ ನಡೆದಿತ್ತು, ಬೈಕ್ ನಲ್ಲಿ ಬಂದಿದ್ದ ಇಬ್ಬರು ಶೂಟರ್ ಗಳು ರಾಜನ್ ಸಂಪರ್ಕ ಹೊಂಡಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣವನ್ನು ಅಂಬೋಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಈಗ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

Write A Comment