ರಾಷ್ಟ್ರೀಯ

ಕನ್ಹಯ್ಯಾ ಹೈದರಾಬಾದಿನಲ್ಲಿ, ವೇಮುಲ ತಾಯಿಯ ಭೇಟಿ

Pinterest LinkedIn Tumblr

23-kanniah-kumar-webಹೈದರಾಬಾದ್: ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿರುವ ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬುಧವಾರ ಹೈದರಾಬಾದ್​ಗೆ ಆಗಮಿಸಿದ್ದು, ಹೊರಗಿನವರಿಗೆ ಯಾರಿಗೂ ಹೈದರಾಬಾದ್ ವಿವಿ ಆವರಣದೊಳಕ್ಕೆ ಬಿಡುವುದಿಲ್ಲ ಎಂದು ವಿಶ್ವ ವಿದ್ಯಾಲಯ ಸ್ಪಷ್ಟ ಪಡಿಸಿದೆ. ಮಂಗಳವಾರ ಸಂಭವಿಸಿದ ಘರ್ಷಣೆಗಳ ಪರಿಣಾಮವಾಗಿ ವಿವಿ ಆವರಣ ಪ್ರಕ್ಷುಬ್ಧವಾಗಿದೆ.

28ರ ಹರೆಯದ ಕನ್ಹಯ್ಯಾ ಕುಮಾರ್ ಅವರು ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ನೇಣುಹಾಕಿಕೊಂಡು ಸಾವನ್ನಪ್ಪಿದ ರೋಹಿತ್ ವೇಮುಲ (26) ಅವರ ತಾಯಿಯನ್ನು ಬುಧವಾರ ಮಧ್ಯಾಹ್ನ ಭೇಟಿ ಮಾಡಿ ರೋಹಿತ್ ವೇಮುಲ ಅವರಿಗೆ ನ್ಯಾಯದೊರಕಿಸುವುದಾಗಿ ಪ್ರತಿಜ್ಞೆ ಮಾಡಿದರು.

ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರ ಒತ್ತಡದ ಪರಿಣಾಮವಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ವೇಮುಲ ಅವರ ತಾಯಿ, ಕೆಲವು ಗೆಳೆಯರು, ಕೆಲವು ಶಿಕ್ಷಕರು ಮತ್ತು ವಿರೋಧ ಪಕ್ಷಗಳು ಆಪಾದಿಸಿವೆ. ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ, ಕುಲಪತಿ ಅಪ್ಪಾ ರಾವ್ ಅವರನ್ನು ವಜಾಗೊಳಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಹಲವಾರು ಬೇಡಿಕೆ ಮುಂದಿಟ್ಟು ಚಳವಳಿ ನಡೆಸುತ್ತಿರುವ ವೇಮುಲ ಅವರ ಗೆಳೆಯರು ಮತ್ತು ಬೆಂಬಲಿಗರನ್ನು ಕನ್ಹಯ್ಯಾ ಕುಮಾರ್ ಅವರು ಸಂಜೆ ಭೇಟಿ ಮಾಡುವ ನಿರೀಕ್ಷೆ ಇದೆ.

Write A Comment