ರಾಷ್ಟ್ರೀಯ

‘ಮೋದಿ ದೇವರು ಕೊಟ್ಟ ವರ’ ಎಂಬ ಹೊಗಳಿಕೆಗೆ ಆರೆಸ್ಸೆಸ್ಸ್ ತೀವ್ರ ಆಕ್ಷೇಪ

Pinterest LinkedIn Tumblr

modi-bhagwath

ನವದೆಹಲಿ, ಮಾ.23: ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ದೇವರು ಕೊಟ್ಟ ವರ ಮತ್ತು ಅವರೊಬ್ಬ ಉದ್ಧಾರಕ ಎಂಬ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಹೊಗಳಿಕೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್ಸ್) ತೀವ್ರ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದೆ. ರಾಜಸ್ಥಾನದ ನಾಗೌರ್ನಲ್ಲಿ ನಡೆದ ಆರೆಸ್ಸೆಸ್ಸ್ ಪ್ರತಿನಿಧಿಗಳ ಸಭೆಯ ನಂತರ, ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲು ಸಂಘದ ಮುಖಂಡರು ಬಿಜೆಪಿ ನಾಯಕರ ಸಭೆ ನಡೆಸಿದ್ದರು.

ಈ ಸಭೆಯಲ್ಲಿ ಮಾತನಾಡಿದ ಆರೆಸ್ಸೆಸ್ಸ್ ಮುಖಂಡರಾದ ಮೋಹನ್ ಭಾಗವತ್ ಮತ್ತಿತರರು, ನಮ್ಮ ಸಿದ್ಧಾಂತದ ಪ್ರಕಾರ ಸಂಘವೇ ಪರಮೋಚ್ಛ ಸಂಸ್ಥೆಯಾಗಿರುವುದರಿಂದ ಇಲ್ಲಿ ವ್ಯಕ್ತಿಗತವಾಗಿ ಯಾರನ್ನೂ ಹೊಗಳಬಾರದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ವೆಂಕಯ್ಯನಾಯ್ಡು ಅವರು ಪ್ರಧಾನಿಯನ್ನು ಆ ರೀತಿ ಇಂದ್ರ, ಚಂದ್ರ ಅಂತ ಹೊಗಳಿದ್ದು ನಮ್ಮ ಸಂಘಟನೆಗೆ ವಿರುದ್ಧವಾದದ್ದಾಗಿದೆ. ಈ ರೀತಿ ವ್ಯಕ್ತಿ ಆರಾಧನೆ ಕೂಡದು ಎಂದು ಎಚ್ಚರಿಸಿದ್ದಾರೆ. ಸಚಿವ ವೆಂಕಯ್ಯನಾಯ್ಡು ಅವರು ಕಳೆದ ಭಾನುವಾರ ಮಾತನಾಡುವ ಸಂದರ್ಭ ಮೋದಿ ಈ ರಾಷ್ಟ್ರಕ್ಕೆ ಭಗವಂತ ದಯಪಾಲಿಸಿದ ವರವಾಗಿದ್ದು, ಅವರಿಂದ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ದೊರೆತಿದೆ ಎಂದು ಹೇಳಿದ್ದರು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಹಾಜರಿದ್ದರು.

Write A Comment