ಅಂತರಾಷ್ಟ್ರೀಯ

ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆ ಜಯ; ನಾಲ್ಕರ ಘಟಕ್ಕೆ ಕಿವೀಸ್ ಲಗ್ಗೆ

Pinterest LinkedIn Tumblr

newzland

ಮೊಹಾಲಿ (ಪಿಟಿಐ): ನ್ಯೂಜಿಲೆಂಡ್ ತಂಡವು ಮಂಗಳವಾರ ವಿಶ್ವ ಟ್ವೆಂಟಿ–20 ಚಾಂಪಿಯನ್ಷಿಪ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.

ಮೊಹಾಲಿ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ (80; 48ಎ, 10ಬೌಂ, 3ಸಿ) ಅಬ್ಬರದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು 22 ರನ್ಗಳಿಂದ ಪಾಕಿಸ್ತಾನ ವಿರುದ್ಧ ಜಯಿಸಿತು. ಪಾಕ್ ತಂಡವು ತನ್ನ ಒಟ್ಟು ಮೂರು ಪಂದ್ಯಗಳನ್ನು ಆಡಿ ಎರಡರಲ್ಲಿ ಸೋತಿದ್ದು, ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು 20 ಓವರ್ ಗಳಲ್ಲಿ 5 ವಿಕೆಟ್ಗಳಿಗೆ 180 ರನ್ ಗಳಿ ಸಿತು. ನಂತರ ದಿಟ್ಟ ಹೋರಾಟ ಮಾಡಿದ ಪಾಕ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 158 ರನ್ ಗಳಿಸಿತು.

ಮಾರ್ಟಿನ್ ಮೋಹಕ ಬ್ಯಾಟಿಂಗ್: ಕಿವೀಸ್ ತಂಡದ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ (17; 21ಎ, 1ಬೌಂ) ಮೊದಲ ವಿಕೆಟ್ಗೆ 62 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು.

ಪಾಕ್ ತಂಡದ ವೇಗಿಗಳಾದ ಮೊಹಮ್ಮದ್ ಆಮಿರ್, ಮೊಹಮ್ಮದ್ ಇರ್ಫಾನ್ ಮತ್ತು ಮೊಹಮ್ಮದ್ ಸಮಿ ಅವರ ಎಸೆತಗಳನ್ನು ಮಾರ್ಟಿನ್ ಲೀಲಾ ಜಾಲವಾಗಿ ಆಡಿದರು. ಫೀಲ್ಡಿಂಗ್ ಕೋಟೆಯನ್ನು ಬೇಧಿಸಿದ ಅವರು ಚೆಂಡನ್ನು ಬೌಂಡರಿಗೆರೆ ದಾಟಿಸುವತ್ತಲೇ ಹೆಚ್ಚು ಒತ್ತು ನೀಡಿದರು. ಕೇವಲ ಏಳು ಓವರ್ಗಳಲ್ಲಿ ತಂಡದ ಮೊತ್ತವು 60ರ ಗಡಿ ದಾಟಿತು. ಎಂಟನೇ ಓವರ್ನಲ್ಲಿ ಇರ್ಫಾನ್ ಎಸೆತವನ್ನು ಮೇಲಕ್ಕೆತ್ತಿದ ವಿಲಿಯಮ್ಸನ್ ಶಾಹಿದ್ ಆಫ್ರಿದಿಗೆ ಕ್ಯಾಚ್ ಆದರು. ಇದರೊಂದಿಗೆ ಜೊತೆಯಾಟ ಮುರಿಯಿತು.

ನಂತರ ಬಂದ ಕಾಲಿನ್ ಮನ್ರೊ ಏಳು ರನ್ ಗಳಿಸಿ ಶಾಹಿದ್ ಆಫ್ರಿದಿ ಬೌಲಿಂಗ್ನಲ್ಲಿ ಶೋಯಬ್ ಮಲಿಕ್ ಕ್ಯಾಚಿತ್ತರು. ಮಾರ್ಟಿನ್ ಜೊತೆಗೂಡಿದ ಎಡಗೈ ಬ್ಯಾಟ್ಸ್ಮನ್ ಕೋರಿ ಆ್ಯಂಡರ್ಸನ್ (21; 14ಎ, 3ಬೌಂ) ಮೂರನೇ ವಿಕೆಟ್ಗೆ 75 ರನ್ ಸೇರಿಸಿದರು. ಸಮಿ ನೇರ ಎಸೆತಕ್ಕೆ ಮಾರ್ಟಿನ್ ಕ್ಲೀನ್ಬೌಲ್ಡ್ ಆಗುವುದ ರೊಂದಿಗೆ ಈ ಜೊತೆಯಾಟಕ್ಕೂ ತೆರೆ ಬಿತ್ತು. ನಂತರ ಕ್ರೀಸ್ಗೆ ಬಂದ ರಾಸ್ ಟೇಲರ್ (ಔಟಾಗದೆ 36; 23ಎ, 2ಬೌಂ, 1ಸಿ) ತಮ್ಮ ಎಂದಿನ ಬೀಸಾಟ ವಾಡಿದರು. ತಂಡದ ಮೊತ್ತವನ್ನು ಹೆಚ್ಚಿ ಸಿದರು. ಆ್ಯಂಡರ್ಸನ್ ವಿಕೆಟ್ ಅನ್ನು ಅಫ್ರಿದಿ ಪಡೆದರೆ, ಲೂಕ್ ರಾಂಚಿಗೆ ಮೊಹಮ್ಮದ್ ಶಮಿ ಪೆವಿಲಿಯನ್ ದಾರಿ ತೋರಿಸಿದರು.

ಶಾರ್ಜಿಲ್ ದಿಟ್ಟ ಹೋರಾಟ: ಕಠಿಣ ಗುರಿ ಬೆನ್ನತ್ತಿದ ಪಾಕ್ ತಂಡಕ್ಕೆ ಶಾರ್ಜಿಲ್ ಖಾನ್ (47; 25, 9ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಅವರು ಅಹಮದ್ ಶೆಹಜಾದ್ (30; 32ಎ, 3ಬೌಂ) ಅವರೊಂದಿಗೆ ಮೊದಲ ವಿಕೆ ಟ್ಗೆ 65 ರನ್ ಸೇರಿಸಿದರು. ಅವರ ಅಬ್ಬ ರದ ಆಟಕ್ಕೆ ಕೇವಲ 5 ಓವರ್ಗಳಲ್ಲಿ 63 ರನ್ಗಳು ಪಾಕ್ ತಂಡದ ಖಾತೆ ಸೇರಿ ದ್ದವು. ಆ್ಯಡಮ್ ಮಿಲ್ನೆ ಬೌಲಿಂಗ್ನಲ್ಲಿ ಗಪ್ಟಿಲ್ ಪಡೆದ ಆಕರ್ಷಕ ಕ್ಯಾಚ್ನಿಂ ದಾಗಿ ಈ ಜೊತೆಯಾಟ ಮುರಿಯಿತು.

ನಂತರ ಖಾಲೀದ್ ಲತೀಫ್ ಕೇವಲ ಮೂರು ರನ್ ಗಳಿಸಿ ಸ್ಯಾಂಟನರ್ ಬೌಲಿಂಗ್ನಲ್ಲಿ ಔಟಾದರು. ಅಹಮದ್ ಶೆಹಜಾದ್ ಕೂಡ ಸ್ಯಾಂಟನರ್ಗೆ ಕ್ಯಾಚಿತ್ತರು.

ಉಮರ್ ಅಕ್ಮಲ್ (24; 26ಎ) ಅವರ ಜೊತೆಗೂಡಿದ ನಾಯಕ ಶಾಹಿದ್ ಆಫ್ರಿದಿ (19; 9ಎ, 2ಬೌಂ, 1ಸಿ) ರನ್ ಗಳಿಕೆಗೆ ವೇಗ ನೀಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 27 ರನ್ ಸೇರಿಸಿದ್ದರು. ಆದರೆ, 16ನೇ ಓವರ್ನಲ್ಲಿ ಅಫ್ರಿದಿ ವಿಕೆಟ್ ಪತನಗೊಳ್ಳುವುದರೊಂ ದಿಗೆ ಪಾಕ್ ತಂಡದ ಗೆಲುವಿನ ಆಸೆ ಕಮ ರಿತು. ನಂತರ ಅಕ್ಮಲ್, ಶೋಯಬ್ ಮಲಿಕ್, ಸರ್ಫರಾಜ್ ಅಹಮದ್ ಅವರ ಹೋರಾಟಕ್ಕೆ ಜಯ ಒಲಿಯಲಿಲ್ಲ.

ಮಾರ್ಚ್ 19ರಂದು ಪಾಕ್ ತಂಡವು ಭಾರತದ ಎದುರು ಸೋತಿತ್ತು. ಅದಕ್ಕೂ ಮುನ್ನ ಬಾಂಗ್ಲಾ ಎದುರು ಜಯಿಸಿತ್ತು. ಮಾರ್ಚ್ 25ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ನ್ಯೂಜಿಲೆಂಡ್ ತಂಡ ಮಾರ್ಚ್ 26ಕ್ಕೆ ನಡೆಯುವ ತನ್ನ ಅಂತಿಮ ಪಂದ್ಯ ದಲ್ಲಿ ಬಾಂಗ್ಲಾದೇಶ ಎದುರು ಆಡಲಿದೆ.

ಸ್ಕೋರ್ಕಾರ್ಡ್
ನ್ಯೂಜಿಲೆಂಡ್ 5 ಕ್ಕೆ 180 (20 ಓವರ್ಗಳಲ್ಲಿ)

ಮಾರ್ಟಿನ್ ಗಪ್ಟಿಲ್ ಬಿ ಮೊಹಮ್ಮದ್ ಸಮಿ 80
ಕೇನ್ ವಿಲಿಯಮ್ಸನ್ ಸಿ ಶಾಹಿದ್ ಅಫ್ರಿದಿ ಬಿ ಮೊಹಮ್ಮದ್ ಇರ್ಫಾನ್ 17
ಕಾಲಿನ್ ಮನ್ರೊ ಸಿ ಖಾಲೀದ್ ಲತೀಫ್ ಬಿ ಶಾಹಿದ್ ಅಫ್ರಿದಿ 07
ಕೋರಿ ಆ್ಯಂಡರ್ಸನ್ ಸಿ ಶೋಯಬ್ ಮಲಿಕ್ ಬಿ ಶಾಹಿದ್ ಅಫ್ರಿದಿ 21
ರಾಸ್ ಟೇಲರ್ ಔಟಾಗದೆ 36
ಲೂಕ್ ರಾಂಚಿ ಸಿ ಶೊಯಬ್ ಮಲಿಕ್ ಬಿ ಮೊಹಮ್ಮದ ಸಮಿ 11
ಗ್ರ್ಯಾಂಟ್ ಎಲಿಯಟ್ ಔಟಾಗದೆ 01
ಇತರೆ: (ಲೆಗ್ಬೈ 4, ವೈಡ್ 3) 07

ವಿಕೆಟ್ ಪತನ: 1–62 (ವಿಲಿಯಮ್ಸನ್; 7.2), 2–75 (ಮನ್ರೊ; 8.5), 3–127 (ಗಪ್ಟಿಲ್; 14.3), 4–132 (ಆ್ಯಂಡರ್ಸನ್; 15.2), 5–164 (ಲೂಕ್; 18.6)
ಬೌಲಿಂಗ್: ಮೊಹಮ್ಮದ್ ಆಮೀರ್ 4–0–41–0 (ವೈಡ್ 1), ಮೊಹಮ್ಮದ್ ಇರ್ಫಾನ್ 4–0–46–1, ಮೊಹಮ್ಮದ್ ಸಮಿ 4–0–23–2 (ವೈಡ್ 1), ಇಮದ್ ವಾಸೀಂ 4–0–26–0, ಶಾಹಿದ್ ಅಫ್ರಿದಿ 4–0–40–2 (ವೈಡ್ 1).

ಪಾಕಿಸ್ತಾನ 5 ಕ್ಕೆ 158 (20 ಓವರ್ಗಳಲ್ಲಿ)

ಶಾರ್ಜಿಲ್ ಖಾನ್ ಸಿ ಮಾರ್ಟಿನ್ ಗಪ್ಟಿಲ್ ಬಿ ಆ್ಯಡಮ್ ಮಿಲ್ನೆ 47
ಅಹಮದ್ ಶೆಹಜಾದ್ ಸಿ ಮಾರ್ಟಿನ್ ಗಪ್ಟಿಲ್ ಬಿ ಮಿಷೆಲ್ ಸ್ಯಾಂಟನರ್ 30
ಖಾಲಿದ್ ಲತೀಫ್ ಸಿ ಗ್ರ್ಯಾಂಟ್ ಎಲಿಯಟ್ ಬಿ ಮಿಷೆಲ್ ಸ್ಯಾಂಟನರ್ 03
ಉಮರ್ ಅಕ್ಮಲ್ ಸಿ ಮಾರ್ಟಿನ್ ಗಪ್ಟಿಲ್ ಬಿ ಆ್ಯಡಮ್ ಮಿಲ್ನೆ 24
ಶಾಹಿದ್ ಅಫ್ರಿದಿ ಸಿ ಕೋರಿ ಆ್ಯಂಡರ್ಸನ್ ಬಿ ಇಶ್ ಸೋಧಿ 19
ಶೋಯಬ್ ಮಲಿಕ್ ಔಟಾಗದೆ 15
ಸರ್ಫರಾಜ್ ಅಹಮದ್ ಔಟಾಗದೆ 11
ಇತರೆ: (ಲೆಗ್ ಬೈ 5, ವೈಡ್ 4) 09

ವಿಕೆಟ್ ಪತನ:1–65 (ಶಾರ್ಜಿಲ್; 5.3), 2–79 (ಖಾಲಿದ್; 8.2), 3–96 (ಶೆಹಜಾದ್; 12.2), 4–123 (ಅಫ್ರಿದಿ; 15.1), 5–140 (ಅಕ್ಮಲ್;17.4)

ಬೌಲಿಂಗ್: ಮಿಷೆಲ್ ಸ್ಯಾಂಟನರ್ 4–0–29–2 (ವೈಡ್ 3), ಕೋರಿ ಆ್ಯಂಡರ್ಸನ್ 2–0–14–0 (ವೈಡ್ 1), ಆ್ಯಡಮ್ ಮಿಲ್ನೆ 4–0–26–2, ಮಿಷೆಲ್ ಮೆಕ್ಲೆಂಗಾನ್ 4–0–43–0, ಗ್ರ್ಯಾಂಟ್ ಎಲಿಯಟ್ 2–0–16–0, ಇಶ್ ಸೋಧಿ 4–0–25–1
ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 22 ರನ್ಗಳ ಜಯ
ಪಂದ್ಯ ಶ್ರೇಷ್ಠ: ಮಾರ್ಟಿನ್ ಗಪ್ಟಿಲ್

Write A Comment