ರಾಷ್ಟ್ರೀಯ

ಪ್ರಧಾನಿಯಿಂದ ಸಕಾರಾತ್ಮಕ ಸ್ಪಂದನೆ: ಮುಫ್ತಿ

Pinterest LinkedIn Tumblr

mehaboobaನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದ್ದು ಮಂಗಳವಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಇಲ್ಲಿನ ಪ್ರಧಾನಿ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮೋದಿ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೆಹಬೂಬಾ ಈ ಭೇಟಿ ಫಲಪ್ರದವಾಗಿದೆ ಎಂದರು.

ಸರ್ಕಾರ ರಚನೆ ಕುರಿತಂತೆ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಕೆಲವೇ ದಿನಗಳಲ್ಲಿ ಸರ್ಕಾರ ರಚಿಸುವುದಾಗಿ ಮೆಹಬೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೆಹಬೂಬಾ ಹಾಕಿರುವ ಹೊಸ ಷರತ್ತುಗಳಿಗೆ ಕಾಶ್ಮೀರದ ಬಿಜೆಪಿ ಘಟಕ ಒಪ್ಪಿಲ್ಲವಾದ್ದರಿಂದ ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆ ವಿಳಂಬವಾಗಿದೆ.

Write A Comment