ಮನೋರಂಜನೆ

ಪಾಕಿಸ್ತಾನಿ ಸಿನಿಮಾದಲ್ಲಿ ನಾನಿಲ್ಲ: ಕರೀನಾ ಕಪೂರ್

Pinterest LinkedIn Tumblr

kareena-kapoor

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸುತ್ತಾಳೆ ಎಂಬ ಸುದ್ದಿಯನ್ನು ಕರೀನಾ ತಳ್ಳಿ ಹಾಕಿದ್ದಾರೆ.

ಪಾಕಿಸ್ತಾನಿ ಸಿನಿಮಾಕ್ಕೆ ಕರೀನಾ ಪಾದಾರ್ಪಣೆ ಮಾಡುತ್ತಿದ್ದು ಆ ಸಿನಿಮಾವನ್ನು ಶೊಹೆಬ್ ಮನ್ಸೂರ್ ನಿರ್ದೇಶಿಸುತ್ತಾರೆ ಎಂದು ವದಂತಿ ಹಬ್ಬಿತ್ತು. ಈ ಬಗ್ಗೆ ಕರೀನಾ ಅವರಲ್ಲಿ ವಿಚಾರಿಸಿದಾಗ, ಈ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪತ್ನಿ ಕರೀನಾ ಇದೀಗ ಅರ್ಜುನ್ ಕಪೂರ್ ಜತೆ ನಟಿಸಿದ ಕಿ ಆ್ಯಂಡ್ ಕ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆರ್. ಬಾಲ್ಕಿ ಅವರ ನಿರ್ದೇಶನದ ಕಿ ಆ್ಯಂಡ್ ಕ ಸಿನಿಮಾ ಏಪ್ರಿಲ್ 1 ರಂದು ತೆರೆ ಕಾಣಲಿದೆ.

Write A Comment