ದೆಹಲಿ: ಲಷ್ಕರೇ ತಯ್ಯಬಾದಿಂದ ಭಾರತದ ಭದ್ರತಾ ಪಡೆಗಳ ಮೇಲೆ ಮತ್ತೆ ದಾಳಿಯಾಗುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿಗಳ ಪ್ರಕಾರ ಎಲ್ ಇ ಟಿ (ಕಾಶ್ಮೀರ) ಪಡೆಯ ಮುಖ್ಯಸ್ಥ ಅಬು ದುಜಾನ ಹಾಗೂ ಇತರೇ 10 ಜನ ಉಗ್ರವಾದಿಗಳು ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಅಬು ದುಜಾನ್ ದಾಳಿಗೆ ಪಾಕಿಸ್ತಾನ ಹಲವು ಕುಖ್ಯಾತ ಉಗ್ರಗಾಮಿ ಸಂಘಟನೆಗಳ ನೆರವು ಕೋರಿದ್ದು ತಮ್ಮ ದಾಳಿಯನ್ನು ಭಾರತದ ಸೇನಾ ಪಡೆಯ ಮೇಲೆಯೇ ನಡೆಸುವ ಬಗ್ಗೆ ಯೋಜನೆ ನಿರೂಪಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಲಷ್ಕರೇ ತಯ್ಯಬಾ ಸಂಘಟನೆಯು ಗಡಿ ಭದ್ರತಾ ಪಡೆ (ಬಿಎಸ್ ಫ್)ಯ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದವರಿಗೆ ಒಂದು ಲಕ್ಷ ಬಹುಮಾನವನ್ನು ಕೊಡುವುದಾಗಿ ಹೇಳಿಕೊಂಡಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಸಿಬ್ಬಂಧಿ ಹಾಗೂ ಉಗ್ರಗಾಮಿಗಳ ನಡುವೆ ನಡೆದ ಎನ್ ಕೌಂಟರ್ ವೇಳೆ ಅಬು ದುಜಾನಾ ಮತ್ತು ಆತನ ನಾಲ್ವರು ಸಂಗಡಿಗರು ಸ್ಥಳಿಯರ ಸಹಾಯದಿಂದ ಪರಾರಿಯಾಗಿದ್ದರು.