ರಾಷ್ಟ್ರೀಯ

ತಲೆನೋವಿಗೆ ಬಳಸುವ ಕನ್ನಡಕ ಕೊಡಿಸಿಲ್ಲವೆಂದು ಬಾಲಕ ಆತ್ಮಹತ್ಯೆ

Pinterest LinkedIn Tumblr

suicide

ಮಧುರೈ/ಸೇಲಂ: ತಲೆನೋವಿನಿಂದ ಬಳಲುತ್ತಿದ್ದ ಬಾಲಕ, ಕನ್ನಡಕ ತೆಗೆದುಕೊಡಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಪೆರುಂಗುಡಿಯ ಮರುತುಪಂಡಿ ನಗರದಲ್ಲಿ ನಡೆದಿದೆ.

14 ವರ್ಷದ ಎಸ್ ಪೋನ್ ರಾಜ್ ಆತ್ಮಹತ್ಯೆಗೆ ಶರಣಾದ ಬಾಲಕ. ಈತನ ತಂದೆ ಸಮೋಸ ವ್ಯಾಪಾರಿ. ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಮಗನನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ, ವೈದ್ಯರು ಕನ್ನಡಕ ಧರಿಸಲು ಹೇಳಿದ್ದಾರೆ.

ಆದರೆ, ಕನ್ನಡಕ ಖರೀದಿಸಲು ಬೇಕಾದಷ್ಟು ಹಣ ತಂದೆ ಬಳಿ ಇರಲಿಲ್ಲವಾದ್ದರಿಂದ ಸುಮ್ಮನಾಗಿದ್ದಾರೆ. ಇದರಿಂದ ನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment