
ನವದೆಹಲಿ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿ ಟೀಂ ಇಂಡಿಯಾದ ಗೆಲುವಿಗೆ ಕಾರಣನಾದ ವಿರಾಟ್ ಕೊಹ್ಲಿಗೆ ಆತ ಮಾಜಿ ಪ್ರೇಯಸಿ ಅನುಷ್ಕಾ ಶರ್ಮಾ ಅಭಿನಂದನಾ ಸಂದೇಶ ಕಳಿಸಿದ್ದಾರೆ ಎಂದು ಬಲ್ಲಮೂಲವೊಂದು ಸುದ್ದಿ ಮಾಡಿದೆ.
ಕೊಲ್ಕತ್ತಾದಲ್ಲಿ ಶನಿವಾರ ಪಾಕ್ ವಿರುದ್ಧದ ಪಂದ್ಯ ಮುಗಿದ ನಂತರ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಸಂದೇಶ ಕಳುಹಿಸಿ ಅಭಿನಂದನೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಪ್ರೀತಿ ಮುರಿದು ಬಿದ್ದಿದ್ದರೂ ಮತ್ತೆ ಅವರು ಒಂದಾಗಲಿದ್ದಾರೆ ಎಂಬ ಸೂಚನೆಯೂ ಲಭಿಸುತ್ತಿದೆ. ಅಂದಹಾಗೆ ಮತ್ತೆ ಒಂದಾಗುವ ಬಗ್ಗೆ ಕೊಹ್ಲಿಯಾಗಲೀ, ಅನುಷ್ಕಾ ಆಗಲಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.ಇತ್ತ ಕೊಹ್ಲಿ ವಿಶ್ವಕಪ್ ನಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ