ರಾಷ್ಟ್ರೀಯ

ಮುಖ್ಯಮಂತ್ರಿಗೆ ರಾಜ್ಯಪಾಲ ಪತ್ರ: ‌ಉತ್ತರಾಖಂಡ: ಬಹುಮತ ಸಾಬೀತಿಗೆ ಮಾ.28ರ ಗಡುವು

Pinterest LinkedIn Tumblr

Uttarakhandಡೆಹ್ರಾಡೂನ್‌/ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ರಾಜಕೀಯ ಬಿಕ್ಕಟ್ಟು ಶನಿವಾರ ತೀವ್ರಗೊಂಡು ಹಲವು ತಿರುವು ಪಡೆದಿದ್ದು, ರಾಜ್ಯಪಾಲರು ಮಧ್ಯ ಪ್ರವೇಶಿಸಿದ್ದಾರೆ. ಮಾರ್ಚ್ 28ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್‌ನ 9 ಬಂಡಾಯ ಶಾಸಕರ ಬೆಂಬಲವಿದೆ ಎಂದು ಶನಿವಾರ ಘೋಷಿಸಿದ ಬಿಜೆಪಿ, ಸರ್ಕಾರ ರಚನೆಗೆ ಯತ್ನಗೆ ಮಾಡಿತು. ಈ ಬೆನ್ನಲ್ಲೆ, ಅಗತ್ಯ ಬಿದ್ದರೆ ಬಹುಮತ ಸಾಬೀತು ಪಡಿಸುವುದಾಗಿ ರಾವತ್ ಅವರು ಸ್ಪಷ್ಟಪಡಿಸಿದರು.
ಬಿಕ್ಕಟ್ಟು ಕುರಿತ ಚರ್ಚೆಗಾಗಿ ರಾಜ್ಯಪಾಲ ಕೃಷ್ಣಕಾಂತ್ ಪೌಲ್ ಭೇಟಿಗೆ ಮುಖ್ಯಮಂತ್ರಿ ಹರೀಶ್ ಅವರು ಸಂಜೆ ಸಮಯ ಕೋರಿದ್ದರು.
ಆದರೆ, ‘ಮಾರ್ಚ್ 29ರೊಳಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿ’ ಎಂದು ಅದಕ್ಕೂ ಮೊದಲೇ ಮುಖ್ಯಮಂತ್ರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ ಎಂದು ರಾಜಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು 70 ಸದಸ್ಯರ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್‌ 36 ಸ್ಥಾನಗಳೊಂದಿಗೆ ಅಧಿಕಾರದಲ್ಲಿದೆ. ಬಿಜೆಪಿ 28 ಸ್ಥಾನಗಳನ್ನು ಹೊಂದಿದೆ. ಈಗ ಕಾಂಗ್ರೆಸ್‌ನ 9 ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

Write A Comment