ನವದೆಹಲಿ (ಎಜೆನ್ಸಿಸ್): ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಎನ್ಡಿಎ ಸರ್ಕಾರವನ್ನು ಟೀಕಿಸುವ ಬದಲು ಯುಪಿಎ ಸರ್ಕಾರ ಟೀಕಿಸಿ ಮುಜುಗರಕ್ಕೆ ಒಳಗಾದ ಘಟನೆ ಬುಧವಾರ ನಡೆದಿದೆ.
ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಅಚಾತುರ್ಯ ನಡೆದಿದೆ.
ಲಿಖಿತ ಭಾಷಣವನ್ನು ಓದುತ್ತಿದ್ದ ಸೋನಿಯಾಗಾಂಧಿ ಕಳೆದ ಎರಡು ವರ್ಷಗಳಲ್ಲಿ ಎನ್ಡಿಎ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎನ್ನುವ ಬದಲು ಯುಪಿಎ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎಂದರು.
ಕೂಡಲೇ ಹಿರಿಯ ನಾಯಕರೊಬ್ಬರು ಅದು ಎನ್ಡಿಎ ಸರ್ಕಾರ ಎಂದು ತಿಳಿಸಿದರು. ಇದರಿಂದ ಮುಜುಗರಕ್ಕೆ ಒಳಗಾದ ಸೋನಿಯಾ ಗಾಂಧಿ ‘ಕ್ಷಮಿಸಿ, ಯುಪಿಎ ಅಲ್ಲ ಎನ್ಡಿಎ ಸರ್ಕಾರ’ ಎಂದರು.
ಇದೇ ವೇಳೆ ಎನ್ಡಿಎ ಸರ್ಕಾರದ ಮಂದಗತಿ ಆಡಳಿತದ ಬಗ್ಗೆ ಕಟುವಾಗಿ ಟೀಕಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ ಸಾಮಾನ್ಯರ ಸೇವೆ ಮಾಡದೆ ವಿಐಪಿಗಳ ಸೇವೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.