
ನವದೆಹಲಿ: ಹಸಿ ಮೆಣಸಿನಕಾಯಿ ತಿಂದ ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಗುವಿನ ಶವಪರೀಕ್ಷೆ ನಡೆಸಿದ ಏಮ್ಸ್ ಆಸ್ಪತ್ರೆಯ ವ್ಯದ್ಯರು ಮಗುವಿನ ಸಾವಿಗೆ ಮೆಣಸಿಕ ಕಾಯಿ ಸೇವನೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಹಸಿ ಮೆಣಸಿಕ ಕಾಯಿ ತಿಂದಾಗ ಗ್ಯಾಸ್ಟ್ರಿಕ್ ದ್ರವಗಳು ಶ್ವಾಸಕೋಶದ ಮೂಲಕ ಹರಿದು ಉಸಿರಾಟದ ತೊಂದರೆ ಉಂಟಾಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಈ ವಿಷಯವನ್ನು ಮೆಡಿಕೋ-ಲೀಗಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಮಗು ಹಲವು ಬಾರಿ ವಾಂತಿ ಮಾಡಿದೆ. ಇದರ ಪರಿಣಾಮ ದ್ರವಗಳು ಉಸಿರಾಟದ ಕೊಳವೆಗೆ ಪ್ರವೇಶಿಸಿವೆ ಎಂದು ವರದಿ ಹೇಳಿದೆ.
ಗ್ಯಾಸ್ಟ್ರಿಕ್ ದ್ರವಗಳು ಅಥವಾ ವಾಂತಿ ಮಾಡಿದ ಪದಾರ್ಥಗಳು ಉಸಿರಾಡುವ ಕೊಳವೆಗೆ ಪ್ರವೇಶಿಸಿ, ಮಗುವಿನ ಉಸಿರು ಕಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳೀಯ ಆಸ್ಪತ್ರೆಯ ವೈದ್ಯರು ಮಗುವನ್ನು ಉಳಿಸಲು ಪ್ರಯತ್ನಿಸಿದ್ದರು. ಆದರೆ ಮಗು ೨೪ ಗಂಟೆಗಳಲ್ಲಿ ಮೃತಪಟ್ಟಿತ್ತು.
ಮೆಣಸಿನ ಕಾಯಿ ತಿಂದು ಸಾವನ್ನಪ್ಪಿರುವುದು ಇದು ಮೊದಲ ಪ್ರಕರಣವಾಗಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಅಪರೂಪದ ಘಟನೆ ಎಂದು ಆಸ್ಪತ್ರೆಯ ವೈದ್ಯ ಡಾ. ಚಿತ್ತರಂಜನ್ ಬೆಹರಾ ತಿಳಿಸಿದ್ದಾರೆ.