ರಾಷ್ಟ್ರೀಯ

ಸಾಲ ಮರು ಪಾವತಿಸದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ; ರೈತ ಆತ್ಮಹತ್ಯೆ

Pinterest LinkedIn Tumblr

farmer suicide

ಅರಿಯಲೂರ್: ತಮಿಳ್ನಾಡಿನ ಅರಿಯಲೂರ್ ಜಿಲ್ಲೆಯಲ್ಲಿ ರು. 1.9 ಲಕ್ಷ ಸಾಲ ಮರು ಪಾವತಿ ಮಾಡಲಾರದೆ ಕಂಗೆಟ್ಟ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಳಗರ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲ ಮರುಪಾವತಿ ಮಾಡದೇ ಇದ್ದಾಗ ಸಾಲ ವಸೂಲಾತಿಯವರು ಈತನ ಟ್ರ್ಯಾಕ್ಟರ್‌ನ್ನು ಜಪ್ತಿ ಮಾಡಿಕೊಂಡಿದ್ದರು.ವರದಿಗಳ ಪ್ರಕಾರ ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ಅಳಗರ್ ರು. 7 ಲಕ್ಷ ಸಾಲ ಪಡೆದಿದ್ದರು. ಇದರಲ್ಲಿ ರು. 5.10 ಲಕ್ಷವನ್ನು ಮರುಪಾವತಿ ಮಾಡಿದ್ದು, ಇನ್ನುಳಿದ ದುಡ್ಡು ಪಾವತಿ ಮಾಡಲು ಬಾಕಿಯಿತ್ತು. ಲ ಮರುಪಾವತಿ ಮಾಡದೇ ಇದ್ದಾಗ ಸಾಲವಸೂಲಾತಿ ಮಾಡುವವರು ಈತನ ಟ್ಯಾಕ್ರರ್ ನ್ನು ವಶ ಪಡಿಸಿಕೊಂಡಿದ್ದಾರೆ.

ಇದರಿಂದ ಮನನೊಂದ ಅಳಗರ್ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ನ್ನ ಮಗ ರು. 5.10 ಲಕ್ಷ ಸಾಲವನ್ನು ಮರುಪಾವತಿ ಮಾಡಿದ್ದಾನೆ. ಇತ್ತ ಬೆಳೆ ನಾಶವಾಗಿದ್ದರಿಂದ ಉಳಿದ ಹಣವನ್ನು ಪಾವತಿ ಮಾಡಲಾಗಿಲ್ಲ. ನಾನು ಹಲವಾರು ಬಾರಿ ಫೈನಾನ್ಸ್ ಕಂಪನಿಗೆ ಹೋಗಿ ಸಾಲ ಮರುಪಾವತಿಗಾಗಿ ಒಂದಷ್ಟು ಕಾಲಾವಕಾಶ ಕೊಡಿ ಎಂದು ಕೇಳಿ ಕೊಂಡಿದ್ದೆ. ಆದರೆ ಅವರು ಟ್ರ್ಯಾಕ್ಟರ್ ನ್ನೇ ವಶ ಪಡಿಸಿಕೊಂಡು ಹೋದರು. ನನ್ನ ಮಗನನ್ನು ನೂರು ಮಂದಿಯ ಮುಂದೆ ಅವಮಾನ ಮಾಡಲಾಯಿತು. ಇದನ್ನು ಸಹಿಸಲು ಸಾಧ್ಯವಾಗದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾನು ಆ ಸಾಲವನ್ನು ಪಾವತಿಸುತ್ತೇನೆ. ಆದರೆ ನನಗೆ ನನ್ನ ಮಗ ವಾಪಸ್ ಸಿಗುತ್ತಾನೆಯೇ? ಎಂದು ಅಳಗರ್ ಅವರ ಅಪ್ಪ ಕಣ್ಣೀರು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಪ್ರಕಾರ 306, 506(2), 294(ಬಿ), 323 ಮತ್ತು 34 ಸೆಕ್ಷನ್ ಅಡಿಯಲ್ಲಿ ಏಳು ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ.

Write A Comment