ಮನೋರಂಜನೆ

51ನೇ ಹುಟ್ಟುಹಬ್ಬದಂದು ಸಿಗರೇಟ್ ತ್ಯಜಿಸುವ ನಿರ್ಣಯ ಕೈಗೊಂಡ ಅಮೀರ್ ಖಾನ್

Pinterest LinkedIn Tumblr

khan_aamir

ಮುಂಬಯಿ: ಬಾಲಿವುಡ್ ಮಿ.ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಇಂದು 51 ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ಅಮಿರ್ ಖಾನ್ ತಮ್ಮ ಕುಟುಂಬಸ್ಥರಿಗಾಗಿ ಇನ್ನು ಮುಂದೆ ಸಿಗರೇಟ್ ಸೇದುವುದಿಲ್ಲ ಎಂದು ನಿರ್ಣಯ ಕೈಗೊಂಡಿದ್ದಾರೆ.

ಬಿ ಟೌನ್‍ನ ಹಲವು ನಟರು ಸ್ಮೋಕ್ ಮಾಡೋದು ಕಾಮನ್. ಅದರಲ್ಲಿ ನಟ ಅಮಿರ್ ಖಾನ್ ಕೂಡ ಒಬ್ಬರು. ಆದರೆ ಅಮಿರ್ ಖಾನ್ ತಮ್ಮ ಹುಟ್ಟುಹಬ್ಬದ ದಿನದಂದು ಸಿಗರೇಟ್ ಬಿಡಲು ನಿರ್ಧರಿಸಿದ್ದಾರಂತೆ. ಹೀಗಾಗಿ ಅಮೀರ್ ಮತ್ತಷ್ಟು ಪರ್ಫೆಕ್ಷನಿಸ್ಟ್ ಆಗುತ್ತಿದ್ದಾರೆ.

‘ಕಯಾಮತ್ ಸೇ ಕಯಾಮತ್ ತಕ್’ ಚಿತ್ರದ ಮೂಲಕ ತಮ್ಮ ಬಾಲಿವುಡ್ ನಲ್ಲಿ ಕೆರಿಯರ್ ಆರಂಭ ಮಾಡಿದ್ದ ಅಮಿರ್, ಇದೀಗ ಬಾಲಿವುಡ್‌ನ ದೊಡ್ಡ ಮಟ್ಟದಲ್ಲಿ ಬ್ರ್ಯಾಂಡ್ ನಟರಾಗಿ ಬೆಳೆದಿದ್ದಾರೆ. . ಅದಾದ ಬಳಿಕ ಬ್ಲ್ಯಾಕ್ ಬಾಸ್ಟರ್ ಹಿಟ್ ಮೂವೀಗಳಾದ 3-ಇಡಿಯಟ್ಸ್, ಪಿಕೆ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ

Write A Comment