ಮನೋರಂಜನೆ

ದೆಹಲಿ ಸರ್ಕಾರದಿಂದ ನಟ ಅಜಯ್ ದೇವಗನ್ ಗೆ ನೋಟೀಸ್

Pinterest LinkedIn Tumblr

ajay-devgan-wiki

ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಗೆ ದೆಹಲಿ ಸರ್ಕಾರ ನೋಟೀಸ್ ಜಾರಿಗೊಳಿಸಿದೆ.

ನಿಷೇಧಿತ “ಪಾನ್ ಮಸಾಲ’ ಹಾಗೂ ಇತರ ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಅಭಿನಯಿಸಿರುವ ಅಜಯ್ ದೇವಗನ್ ಸೇರಿದಂತೆ ಕೆಲವು ಬಾಲಿವುಡ್ ನಟ ನಟಿಯರಿಗೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ.

ಶಾರೂಖ್ ಖಾನ್, ಸೈಫ್ ಅಲಿ ಖಾನ , ಅರ್ಬಾ ಖಾನ್, ಗೋವಿಂದ ಹಾಗೂ ಸನ್ನಿ ಲಿಯೋನ್, ಅಜಯ್ ದೇವಗನ್ ಸೇರಿದಂತೆ ಮುಂತಾದ ನಟರಿಗೆ ನಿಷೇದಿತ ತಂಬಾಕು ಜಾಹೀರಾತುಗಳಲ್ಲಿ ಅಭಿನಯಸಿದಂತೆ ದೆಹಲಿಯ ಆರೋಗ್ಯ ಇಲಾಖೆ ಮನವಿ ಮಾಡಿತ್ತು.

ಇಲಾಖೆಯ ಮನವಿಗೆ ಸ್ಪಂದಿಸಿದ ಸನ್ನಿ ಲಿಯೋನ್ ಇನ್ನು ಮುಂದೆ ಇಂತಹ ಜಾಹಿರಾತುಗಳಲ್ಲಿ ಅಭಿನಯಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಇನ್ನುಳಿದ ಯಾವುದೇ ನಟರು, ಇಲಾಖೆಯ ಮನವಿಗೆ ಸ್ಪಂದಿಸಿಲ್ಲ. ಈ ಹಿನ್ನಲೆಯಲ್ಲಿ ಉಳಿದ ಕಲಾವಿದರಿಗೆ ನೋಟೀಸ್ ಜಾರಿ ಮಾಡಿದೆ.

Write A Comment