ರಾಷ್ಟ್ರೀಯ

ವಿಮಾನ ಅಪಘಾತದಲ್ಲಿ ಮೃತಪಟ್ಟರೆ ಇನ್ನು ಮುಂದೆ 1 ಕೋಟಿ ಪರಿಹಾರ !

Pinterest LinkedIn Tumblr

flight

ನವದೆಹಲಿ: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರೆ, ಗಾಯಗೊಂಡರೆ ಅಥವಾ ಕಳೆದು ಹೋದರೆ ವ್ಯಕ್ತಿಯ ಕುಟುಂಬಕ್ಕೆ ಅಧಿಕಾರ ಪರಿಹಾರ ನೀಡುವ ಸಂಬಂಧ ಮಸೂದೆಯೊಂದು ಸಂಸತ್ತಿನಲ್ಲಿ ಅನುಮೋದನೆ ನೀಡಿದೆ.

ಇದರಂತೆ ವಿಮಾನದಿಂದ ಉಂಟಾಗುವ ದುರ್ಘಟನೆಗಳಲ್ಲಿ ಮೃತಪಟ್ಟವರಿಗೆ ರು. 1 ಕೋಟಿ ಹಣ ಪರಿಹಾರವಾಗಿ ದೊರೆಯಲಿದೆ. ಅಲ್ಲದೆ ಅನಗತ್ಯವಾಗಿ ವಿಮಾನ ವಿಳಂಬವಾದರೆ ಸಮಸ್ಯೆಯುಂಟಾದರೂ ಕೂಡ ಪರಿಹಾರ ಪಡೆಯಲು ಮಸೂದೆ ಅವಕಾಶ ಮಾಡಿಕೊಡಲಿದೆ.

ಅನುಮೋದನೆಗೊಂಡಿರುವ ಮಸೂದೆಗೆ ಕಳೆದ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಅನುಮೋದನೆ ದೊರಕಿತ್ತು. ಆದರೆ, ಇದೀಗ ಇದೇ ಮಸೂದೆಗೆ ಕೆಲವು ತಿದ್ದುಪಡಿಗಳನ್ನು ಮಾಡುವ ಮೂಲಕ ರಾಜ್ಯಸಭೆಯಲ್ಲೂ ಅನುಮೋದನೆ ನೀಡಲಾಗಿದೆ. ತಿದ್ದುಪಡಿಯಾದ ಈ ಮಸೂದೆಗೆ ಲೋಕಸಭೆಯಲ್ಲಿ ಮಂಡನೆಯಾಗಿ ಸದನ ಒಪ್ಪಿಗೆ ಸೂಚಿಸಿತ್ತು.

ಅನುಮೋದನೆಗೊಂಡಿರುವ ಮಸೂದೆ ಪ್ರಕಾರ ವಿಮಾನದಿಂದಾಗಿ ಅಪಘಾತಕ್ಕೀಡಾಗಿ ಮೃತಪಟ್ಟರೆ, ಆ ವ್ಯಕ್ಯಿ ಕುಟುಂಬಕ್ಕೆ ಪಡೆಯುವ ವಿಶೇಷ ಹಕ್ಕನ್ನು ಪಡೆಯುತ್ತಾರೆ. (ಎಸ್ ಡಿಆರ್) ಅನುಸಾರವಾಗಿ ಪರಿಹಾರವನ್ನು ಪಡೆಯಬಹುದಾಗಿದೆ. ಈ ಮಸೂದೆಯ ಪ್ರಕಾರ ಅಪಘಾತದಲ್ಲಿ ಮೃತಪಟ್ಟರೆ, ಗಾಯಗೊಂಡರೆ, ಕಳೆದು ಹೋದರೆ, ದೊರಕುವ ಪರಿಹಾರದ ಮೊತ್ತ ಎಸ್ ಡಿಆರ್ ಪ್ರಮಾಣದ ಒಂದು ಲಕ್ಷದಿಂದ 113100ರಷ್ಟು ಹೆಚ್ಚಾಗಲಿದೆ.

ಅಮೆರಿಕನ್ ಡಾಲರ್, ಯೂರೊ, ಜಪಾನ್ ಯೆನ್ ಹಾಗೂ ಪೊಂಡ್ ಸ್ಟೆರ್ಲಿಂಗ್ ಗಳ ಮಾರುಕಟ್ಟೆ ದರ ಆಧರಿಸಿ, ಎಸ್ ಡಿಆರ್ ನಿರ್ಧರಿಸಲ್ಪಡುತ್ತದೆ. ಇದೀಗ ಒಂದು ಎಸ್ ಡಿಆರ್ ನ ಮೌಲ್ಯ ರು.94 ಆಗಿದ್ದು, ಭಾರತದಲ್ಲಿ ಪರಿಹಾರದ ಮೊತ್ತ ಒಂದು ಕೋಟಿ ಆಗಲಿದೆ.

ಈ ಹಿಂದೆ ವಿಮಾನ ಅನಗತ್ಯವಾಗಿ ವಿಳಂಬವಾದರೆ ಪ್ರತಿ ಪ್ರಯಾಣಿಕ ಪರಿಹಾರವಾಗಿ 4150 ಎಸ್ ಡಿಆರ್ ಪಡೆಯುತ್ತಿದ್ದ. ಇದೀಗ ಇದರ ಮೊತ್ತವನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ಪ್ರಯಾಣಿಕನು 4150 ಎಸ್ ಡಿಆರ್ ನಿಂದ 4694 ಎಸ್ ಡಿಆರ್ ಪಡೆಯಲಿದ್ದಾನೆ. ಇನ್ನು ಪ್ರಯಾಣಿಕ ತಂದ ಸರಕು ಅಥವಾ ಬ್ಯಾಗುಗಳೇನಾದರೂ ಕಳೆದುಹೋದರೆ ಅಥವಾ ಅವುಗಳಿಗೆ ಹಾನಿ ಸಂಭವಿಸಿದರೆ ಅವರೂ ಕೂಡ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿದ್ದು, 1,000 ಎಸ್ ಡಿಆರ್ ದಿಂದ 1131 ರವರೆಗೆ ಹೆಚ್ಚು ಮಾಡಲಾಗಿದೆ.

Write A Comment