ಮನೋರಂಜನೆ

ಜೀವನವೇ ಬೇಡವೆನ್ನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ: ಸುರೇಶ್ ರೈನಾ

Pinterest LinkedIn Tumblr

Suresh Raina

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರ್ ರೌಂಡರ್ ಆಟಗಾರ ಸುರೇಶ್ ರೈನಾ ಹಲವು ವರ್ಷಗಳ ಹಿಂದೆ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳಬೇಕು ಎಂದು ಯೋಚಿಸಿದ್ದರಂತೆ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುರೇಶ್ ರೈನಾ ತಮ್ಮ ಹದಿಹರೆಯದ ದಿನಗಳಲ್ಲಿ ಕೆಲವು ಘಟನೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಗಿ ಹೇಳಿದ್ದಾರೆ.

ಲಕ್ನೋದ ಸ್ಫೋರ್ಟ್ಸ್ ಹಾಸ್ಟೆಲ್ ನಲ್ಲಿದ್ದಾಗ ನಡೆದ ಕೆಲವು ಅಹಿತಕರ ಘಟನೆಗಳಿಂದ ಸುರೇಶ್ ರೈನಾ ವಿಚಲಿತರಾಗಿದ್ದರಂತೆ. ಈ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ನನಗೆ ಬಂದಿತ್ತು ಎಂದು ತಿಳಿಸಿದ್ದಾರೆ.

ರೈನಾ 13 ವರ್ಷದವರಾಗಿದ್ದಾಗ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಆ ವೇಳೆ ರೈನಾ ನಿದ್ರಿಸುತ್ತಿದ್ದಾಗ ಯಾರೋ ಇವರ ಕೈಗಳನ್ನು ಕಟ್ಟಿ, ಎದೆಯ ಮೇಲೆ ದೊಡ್ಡ ಮಗುವನ್ನು ಕೂರಿಸಿ ಮುಖದ ಮೇಲೆ ಮೂತ್ರ ವಿಸರ್ಜಿಸಲು ಶುರು ಮಾಡುತ್ತಿದ್ದಂತೆ ತಕ್ಷಣ, ಆ ಮಗುವನ್ನ ತಳ್ಳಿ ತಪ್ಪಿಸಿಕೊಂಡಿದ್ದಾಗಿ ರೈನಾ ಹೇಳಿದ್ದಾರೆ.

ಲಕ್ನೋದ ಸ್ಫೋರ್ಟ್ಸ್ ಹಾಸ್ಟೆಲ್ ನಲ್ಲಿ ಅವರ ಸಹಪಾಠಿಯೊಬ್ಬ ಹಾಕಿ ಸ್ಟಿಕ್ ನಿಂದ ಚೆನ್ನಾಗಿ ಥಳಿಸಿದ್ದನಂತೆ. ಈ ಘಟನೆಯಿಂದಾಗಿ ರೈನಾ ಕೋಮಾ ತಲುಪಿದ್ದರಂತೆ.

ಇದಾದ ನಂತರ ರೈನಾ ಹಾಸ್ಟೆಲ್ ಬಿಟ್ಟು ಮನೆಗೆ ಹೋಗಿದ್ದರಂತೆ. ನಂತರ ತಣ್ಣ ಅಣ್ಣ ಸಮಾಧಾನ ಪಡಿಸಿದ ನಂತರ ಎರಡು ತಿಂಗಳ ನಂತರ ಹಾಸ್ಟೆಲ್ ಗೆ ವಾಪಸ್ ಬಂದುದ್ದಾಗಿ ಸುರೇಶ್ ರೈನಾ ಹೇಳಿದ್ದಾರೆ.

Write A Comment