ರಾಷ್ಟ್ರೀಯ

ಜಾಲತಾಣ ಬಳಕೆ ದಿನಕ್ಕೆ 109 ನಿಮಿಷ

Pinterest LinkedIn Tumblr

Whatsap-Face-Book-clrನವದೆಹಲಿ, ಮಾ. ೧೦- ದಿನೇ ದಿನೇ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ದಿನಕ್ಕೆ 109 ನಿಮಿಷವನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಇತ್ತೀಚೆಗೆ ನಡೆಸಲಾದ ಸಮೀಕ್ಷೆ ಪ್ರಕಾರ ಪ್ರತಿದಿನ ಫೇಸ್‌ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಜನ ಸರಾಸರಿ 109 ನಿಮಿಷಗಳನ್ನು ಕಳೆಯುತ್ತಿದ್ದಾರೆ ಎಂದು ಬೆಳಕಿಗೆ ಬಂದಿದೆ.

ಇಂಟರ್‌ನೆಟ್ ಸಂಪರ್ಕ ಹೊಂದಿರುವ ಪ್ರತಿ ಹತ್ತು ವಯಸ್ಕರಲ್ಲಿ 9 ಮಂದಿ ಯಾವುದಾದರೊಂದು ಸಾಮಾಜಿಕ ಜಾಲತಾಣದ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

ಸಾಮಾಜಿಕ ಜಾಲತಾಣದ ಬಳಸುವ ಕಾರಣದ ಬಗ್ಗೆ ಹಲವು ಕುತೂಹಲ ಮಾಹಿತಿ ವ್ಯಕ್ತವಾಗಿದ್ದು, ಕೆಲವರು ಸ್ನೇಹಿತರ ಸಂಪರ್ಕ ಕಾಪಾಡಿಕೊಳ್ಳಲು ಸಾಮಾಜಿಕ ಜಾಲತಾಣ ಬಳಸಿದರೆ, ಇನ್ನು ಕೆಲವರು ಸಮಯ ಕಳೆಯಲಿ ಎಂದು ಸಾಮಾಜಿಕ ಜಾಲತಾಣ ಬಳಸುವುದಾಗಿ ಹೇಳಿದ್ದಾರೆ.

ಪ್ರತಿವರ್ಷ ಸಾಮಾಜಿಕ ಜಾಲತಾಣ ಬಳಸುವವರ ಸಮಯ ಏರುತ್ತಿದ್ದು, 2012ರಲ್ಲಿ ಸರಾಸರಿ ಸಮಯಗಳಲ್ಲಿ 96 ನಿಮಿಷ ಇತ್ತು, 2013ರಲ್ಲಿ 100 ನಿಮಿಷ, 2014ರಲ್ಲಿ 103 ನಿಮಿಷ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ.

Write A Comment