ಮನೋರಂಜನೆ

ಧೋನಿ ನಿವೃತ್ತಿಗೆ ಶಾಸ್ತ್ರಿ ಒಲವು; ವಿರಾಟ್ ಗೆ ಪಟ್ಟ ಕಟ್ಟಲು ಉತ್ಸುಕ..!

Pinterest LinkedIn Tumblr

ravi

ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತಂತೆ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಒಲವು ವ್ಯಕ್ತಪಡಿಸಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

ನಿನ್ನೆ ಕೋಲ್ಕತಾದಲ್ಲಿ ರವಿಶಾಸ್ತ್ರಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಿಂದ ಇಂತಹ ಅನುಮಾನ ಮೂಡುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ಭಾರತ ತಂಡ ಕಂಡ ಅತ್ಯಂತ ಯಶಸ್ವೀ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಂಡದ ಒಂದಿಬ್ಬರು ಆಟಗಾರರು ಅವರ ನಿವೃತ್ತಿ ಬಯಸಿದ್ದಾರೆ ಎಂದು ಹೇಳುವ ಮೂಲಕ ರವಿಶಾಸ್ತ್ರಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ.

ಕೋಲ್ಕತಾದಲ್ಲಿ ಮಾತನಾಡಿದ ರವಿಶಾಸ್ತ್ರಿ ಅವರು, ನಾನು ತುಂಬಾ ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಎಂದು ಹೇಳಿದ್ದೆ. ಆದರೆ ಪ್ರಸ್ತುತ ಭಾರತದ ತಂಡದ ಒಂದಿಬ್ಬರು ಆಟಗಾರರು ಧೋನಿ ನಿವೃತ್ತಿ ಬಯಸಿದ್ದಾರೆ ಎಂದು ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಧೋನಿ ನಿವೃತ್ತಿಗೆ ರವಿಶಾಸ್ತ್ರಿ ಒಲವು ವ್ಯಕ್ತಪಡಿಸಿದ್ದಾರೆಯೇ ಎಂಬ ಅನುಮಾನಗಳು ಕಾಡತೊಡಗಿವೆ.

“ಧೋನಿ ಭಾರತ ಕ್ರಿಕೆಟ್ ತಂಡ ಇದುವರೆಗೆ ಕಂಡ ಅತ್ಯಂತ ಯಶಸ್ವೀ ನಾಯಕ ಎಂದು ಬಹಳ ದಿನಗಳ ಹಿಂದೆ ಹೇಳಿದ್ದೆ. ಆದರೆ ಪ್ರಸ್ತುತ ಧೋನಿ ನಿವೃತ್ತಿ ಕುರಿತಂತೆ ತಂಡದ ಕೆಲ ಆಟಗಾರರು ಉತ್ಸುಕರಾಗಿದ್ದಾರೆ. ಅವರು ಧೋನಿ ನಿವೃತ್ತಿ ಬಯಸಿದ್ದಾರೆ. ತಂಡದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಅವರ ಅಟದಲ್ಲಿ ವೃತ್ತಿಪರತೆ ಕಾಣುತ್ತಿದೆ. ಕೊಹ್ಲಿ ಯಾವಾಗಲೂ ದೊಡ್ಡ ವೇದಿಕೆಗಳನ್ನು ಎದುರು ನೋಡುತ್ತಿರುತ್ತಾರೆ. ವಿಶ್ವದ ಅತ್ಯುತ್ತಮ ತಂಡಗಳ ಎದುರು ಸ್ಪರ್ಧಿಸುವುದನ್ನು ಕೊಹ್ಲಿ ಬಯಸುತ್ತಾರೆ. ಇದಕ್ಕೆ ಇತ್ತೀಚೆಗೆ ಏಷ್ಯಾಕಪ್ ಸರಣಿಯೇ ಸಾಕ್ಷಿ. ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಭಾರತಕ್ಕೆ ಮಾರಕವಾಗಿ ಪರಿಣಮಿಸಿದ್ದ ಮಹಮದ್ ಆಮೀರ್ ಬೌಲಿಂಗ್ ಅನ್ನು ಕೊಹ್ಲಿ ಸಮರ್ಥವಾಗಿ ಎದುರಿಸಿ ರನ್ ಗಳಿಕೆ ಮಾಡಿದ್ದರು. ಅದು ವಿಶ್ವ ಶ್ರೇಣಿಯ ಇನ್ನಿಂಗ್ಸ್ ಆಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.

ಅಂತೆಯೇ ಕೇವಲ ಓರ್ವ ಕ್ರಿಕಟರ್ ನಿಂದ ಮಾತ್ರ ತಂಡದ ಗೆಲುವು ಸಾಧ್ಯವಿಲ್ಲ. ಹೀಗಾಗಿ ತಂಡದ 7 ರಿಂದ 8 ಮಂದಿ ತಮ್ಮ ಸಂಪೂರ್ಣ ಸಾಮರ್ಥ್ಯದ ಆಟ ಪ್ರದರ್ಶನ ಮಾಡಿದರೆ ಮಾತ್ರ ತಂಡದ ಗೆಲುವು ಸಾಧ್ಯ ಎಂದೂ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ರೋಹಿತ್ ಶರ್ಮಾ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಕೆಳ ಮಟ್ಟದ ಬ್ಯಾಟಿಂಗ್ ಆರ್ಡರ್ ನಲ್ಲಿ ಧೋನಿ ಅತ್ಯುತ್ತಮವಾಗಿದ್ದು, ಶಿಖರ್ ಧವನ್ ಏಷ್ಯಾ ಕಪ್ ನಲ್ಲಿ ಒಂದಷ್ಟು ಒಳ್ಳೆಯ ಆಟವಾಡಿದ್ದಾರೆ. ಯುವರಾಜ್ ಸಿಂಗ್ ಇನ್ನೂ ಉತ್ತಮವಾಗಿ ಆಡಬೇಕಿದೆ. ಟಿ20 ವಿಶ್ವಕಪ್ ಸರಣಿಯಂತಹ ದೊಡ್ಡ ಸರಣಿಗಳನ್ನು ಗೆಲ್ಲಬೇಕು ಎಂದರೆ ತಂಡದ 7-8 ಮಂದಿ ಆಟಗಾರರು ಸಂಪೂರ್ಣವಾಗಿ ತಮ್ಮ ಸಾಮರ್ಥ್ಯದ ಆಟ ಪ್ರದರ್ಶಿಸಬೇಕು.

ಬೌಲಿಂಗ್ ನಲ್ಲಿ ಆಶೀಶ್ ನೆಹ್ರಾ, ಜಸ್ಪ್ರೀತ್ ಬುಮ್ರಾಹ್ ಮತ್ತು ಹಾರ್ಧಿಕ್ ಪಾಂಡ್ಯಾ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಶಾಸ್ತ್ರಿ ಹೇಳಿದರು. ಒಟ್ಟಾರೆ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ನೀಡುವರ ಕುರಿತು ಪರೋಕ್ಷವಾಗಿ ಒಲವು ವ್ಯಕ್ತಪಡಿಸಿದ್ದಾರೆ.

Write A Comment