ರಾಷ್ಟ್ರೀಯ

ಜೆಎನ್‌ಯುನಲ್ಲಿ ಮನುಸ್ಮೃತಿ ಪ್ರತಿ ಸುಟ್ಟು ಹಾಕಿದ ಎಬಿವಿಪಿ

Pinterest LinkedIn Tumblr

ABVP set ablaze Manusmriti in JNU

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಯದ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಮನುಸ್ಮೃತಿಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

ಮಹಿಳೆಯರನ್ನು ಅವಹೇಳನ ಮಾಡುವಂಥಾ ವಿಷಯಗಳಿರುವ ಮನುಸ್ಮೃತಿಯನ್ನು ಒಪ್ಪಿಕೊಳ್ಳುವುದಕ್ಕೆ ಅಸಾಧ್ಯ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಎಬಿವಿಪಿ ಮನುಸ್ಮೃತಿಯ ಪ್ರತಿಯನ್ನು ಸುಟ್ಟು ಹಾಕಿದೆ.

ಇವತ್ತು (ಮಾರ್ಚ್ 8) ಮಹಿಳಾ ದಿನ, ಮನುಸ್ಮೃತಿ ಯಲ್ಲಿ ಮಹಿಳೆಯನ್ನು ಅವಹೇಳನ ಮಾಡಲಾಗಿದೆ. ಇಂಥಾ ವಿಷಯಗಳಿರುವ ಮನುಸ್ಮೃತಿಯ ಭಾಗದ ಪ್ರತಿಯನ್ನು ನಾವು ಸುಟ್ಟಿದ್ದೇವೆ ಎಂದು ಜೆಎನ್‌ಯು ಎಬಿವಿಪಿ ಯುನಿಟ್‌ನ ಉಪಾಧ್ಯಕ್ಷ ಜತಿನ್ ಗೊರಯ್ಯಾ ಹೇಳಿದ್ದಾರೆ.

ಮನುಸ್ಮೃತಿಯಲ್ಲಿ ಮಹಿಳೆಯರನ್ನು ಅವಹೇಳನ ಮಾಡಿರುವ 40 ವಿಷಯಗಳನ್ನು ಓದಿದ ನಂತರ ಆ ಪುಟಗಳ ಪ್ರತಿಯನ್ನು ಸುಡಲಾಯಿತು.

ಮಹಿಳೆ ಮತ್ತು ದಲಿತರನ್ನು ಅವಹೇಳನ ಮಾಡುವ ವಿಷಯಗಳು ಇದರಲ್ಲಿವೆ. ನಾವು ಮಾಡಿದ್ದು ತಪ್ಪು ಎಂದಾದರೆ ಅದನ್ನು ನಮಗೆ ಹೇಳಬಹುದು ಎಂದು ಹೇಳಿರುವ ಎಬಿವಿಪಿ, ಮನುವಾದದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿತ್ತು.

Write A Comment