ರಾಷ್ಟ್ರೀಯ

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ರಾಷ್ಟ್ರಪತಿ

Pinterest LinkedIn Tumblr

PRESIDENT_WEBನವದೆಹಲಿ: ಇದೇ ತಿಂಗಳು 11 ರಂದು ಪ್ರಾರಂಭವಾಗಲಿರುವ ಆರ್ಟ್ ಆಫ್ ಲಿವಿಂಗ್​ನ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸದಿರಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿರ್ಧರಿಸಿದ್ದಾರೆ.

ಯಮುನಾ ನದಿ ದಂಡೆಯ ಮೇಲೆ ಕಾರ್ಯಕ್ರಮಕ್ಕಾಗಿ ಸಿದ್ದಗೊಳಿಸುತ್ತಿರುವ ವೇದಿಕೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಮತ್ತು ಮುಖ್ಯ ರಸ್ತೆಗಳಿಂದ ವೇದಿಕೆಗೆ ಸಂಪರ್ಕ ಕಲ್ಪಿಸಲು ಸೈನಿಕರ ಬಳಕೆ ವಿಷಯಕ್ಕೆ ಸಂಬಂಧಿಸಿದಂತೆ ಉತ್ಸವ ವಿವಾದದ ಗೂಡಾಗಿದೆ.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಣವ್ ಭಾಗವಹಿಸಲಿದ್ದರು ಆದರೆ ಉತ್ಸವಕ್ಕೆ ಮುನ್ನವೆ ಅಡಚಣೆ ಎದುರಾಗಿರುವುದು ರಾಷ್ಟ್ರಪತಿಗಳಿಗು ಮುಜುಗರ ಉಂಟುಮಾಡಿದೆ. ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ವಿಷಯವನ್ನು ದೃಢಪಡಿಸಿವೆ.

Write A Comment