ಅಂತರಾಷ್ಟ್ರೀಯ

ಭಾರತದ ಮಡಿಲಿಗೆ ಏಷ್ಯಾಕಪ್; ಬಾಂಗ್ಲಾ ವಿರುದ್ಧ 8 ವಿಕೆಟ್‌ಗಳ ಜಯ

Pinterest LinkedIn Tumblr

india-asia-cup-champions

ಮೀರ್‍ಪುರ್: ಟಿ-20 ಫೈನಲ್‍ನಲ್ಲಿ ಅತಿಥೇಯ ಬಾಂಗ್ಲಾದೇಶವನ್ನು 8 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಭಾರತ 6 ಬಾರಿ ಏಷ್ಯಾಕಪ್‍ನ್ನು ಎತ್ತಿ ಹಿಡಿದಿದೆ. ಈ ಮೂಲಕ 50 ಓವರ್‍ಗಳ ಏಕದಿನ ಏಷ್ಯಾಕಪ್ ಮತ್ತ್ತು ಟಿ-20 ಏಷ್ಯಾಕಪ್‍ನ್ನು ಮೊದಲ ಬಾರಿಗೆ ಜಯಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

4

11

32

ಮಳೆ ಬಂದು 15 ಓವರ್‍ಗಳಿಗೆ ಕಡಿತಗೊಂಡರೂ ಶಿಖರ್ ಧವನ್, ವಿರಾಟ್ ಕೊಹ್ಲಿ ಸಾಹಸ, ಕೊನೆಯಲ್ಲಿ ಧೋನಿ ಆಕ್ರಮಣಕಾರಿ ಆಟದಿಂದ ಭಾರತ 13.5 ಓವರ್‍ಗಳಲ್ಲಿ 122 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು. ಈ ಮೂಲಕ ಈ ಬಾರಿಯಾದರೂ ಏಷ್ಯಾಕಪ್ ಜಯಿಸಬೇಕೆಂಬ ಬಾಂಗ್ಲಾದ ಕನಸು ನುಚ್ಚುನೂರಾಯಿತು.

5 ರನ್‍ಗಳಿಸಿದಾಗ 1 ರನ್ ಗಳಿಸಿದ್ದ ರೋಹಿತ್ ಶರ್ಮಾ ಔಟಾದರೂ, 2 ನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ 94 ರನ್ ಪೇರಿಸುವ ಮೂಲಕ ಭಾರತ ಜಯಗಳಿಸಲು ಕಾರಣರಾದರು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶಿಖರ್ ಧವನ್ 60 ರನ್ (44ಎಸೆತ, 9ಬೌಂಡರಿ 1 ಸಿಕ್ಸರ್) ಸಿಡಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದರು.

222222

dhoni

dhoni1

ಏಷ್ಯಾಕಪ್‍ನಲ್ಲಿ ಉತ್ತಮ ಆಡುತ್ತಾ ಬಂದಿದ್ದ ಕೊಹ್ಲಿ ಈ ಪಂದ್ಯದಲ್ಲಿ 41ರನ್(28 ಎಸೆತ, 5 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರೆ, ಕೊನೆಯಲ್ಲಿ ನಾಯಕ ಧೋನಿ ಬಿರುಸಿನ 20 ರನ್( 6 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದ ಆರಂಭಿಕ ಆಟಗಾರಿಬ್ಬರು 30 ರನ್‍ಗೆ ಔಟಾಗಿದ್ದರು. ಒಂದು ಹಂತದಲ್ಲಿ 75 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಮಹಮದುಲ್ಲ ರಿಯಾದ್ ಮತ್ತು ಶಬ್ಬೀರ್ ರೆಹ್ಮಾನ್ ಮುರಿಯದ 6ನೇ ವಿಕೆಟ್‍ಗೆ 20 ಎಸೆತಗ ಳಲ್ಲಿ 45 ರನ್ ಪೇರಿಸುವ ಮೂಲಕ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು 120 ರನ್ ಗಳಿಸಿತು.

ಶಬ್ಬೀರ್ ರೆಹ್ಮಾನ್ 32 ರನ್( 29 ಎಸೆತ, 2 ಬೌಂಡರಿ) ಗಳಿಸಿದರೆ ಮಹಮದುಲ್ಲ 33 ರನ್(13 ಎಸೆತ, 2 ಬೌಂಡರಿ,2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು.

ಯಾರು ಎಷ್ಟು ರನ್?
ತಮಿಮ್ ಇಕ್ಬಲ್ 13, ಸೌಮ್ಯ ಸರ್ಕಾರ್ 14, ಶಬ್ಬೀರ್ ರಹ್ಮಾನ್ ಔಟಾಗದೇ 32, ಶಕೀಬ್ ಅಲ್ ಹಸನ್ 21, ಮುಶ್ಫೀಕರ್ ರಹೀಂ 4, ಮುಶ್ರಫೆ ಮೊರ್ತಜಾ 0, ಮಹಮುದುಲ್ಲ ಔಟಾಗದೇ 33 ರನ್.

mahmudullah-cameo

333

ಯಾರಿಗೆ ಎಷ್ಟು ವಿಕೆಟ್?
ಆರ್ ಅಶ್ವಿನ್, ಆಶೀಷ್ ನೆಹ್ರಾ, ಜಸ್‍ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. 3 ಓವರ್‍ಗೆ 35 ರನ್ ನೀಡಿದ ಹಾರ್ದಿಕ್ ಪಾಂಡ್ಯ ಕೊನೆಯ ಓವರ್‍ನಲ್ಲಿ 21 ರನ್ ನೀಡುವ ಮೂಲಕ ದುಬಾರಿಯಾದರು.

ಏಷ್ಯಾಕಪ್‍ನಲ್ಲಿ ಭಾರತದ ಸಾಧನೆ: 1984, 1988, 1990, 1995, 2010 ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 1997 ಮತ್ತು 2004ರಲ್ಲಿ ರನ್ನರ್ ಅಪ್ ಆಗಿತ್ತು.

Write A Comment