ರಾಷ್ಟ್ರೀಯ

ಜನನಾಯಕರಾಗಿ ಬೆಳೆಯಲು ಶಾಸಕಿಯರಿಗೆ ಮೋದಿ ಕರೆ

Pinterest LinkedIn Tumblr

modiನವದೆಹಲಿ: ಮಹಿಳೆಯರು ತಾಂತ್ರಿಕವಾಗಿ ಸಶಕ್ತರಾಗಬೇಕು ಮತ್ತು ಜನನಾಯಕರಾಗಿ ಬೆಳೆಯಬೇಕು, ಈ ಮೂಲಕ ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಶಾಸನಸಭೆಗಳ ಮಹಿಳಾ ಸದಸ್ಯರ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.

ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸಬೇಕಿದೆ. ಮಹಿಳೆಯರು ತಮ್ಮನ್ನು ತಾಂತ್ರಿಕವಾಗಿ ಸಶಕ್ತರನ್ನಾಗಿಸಿಕೊಳ್ಳಬೇಕು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ವಿಚಾರಗಳ ಕುರಿತು ಕೂಲಂಕಶವಾಗಿ ಅಧ್ಯಯನ ನಡೆಸಬೇಕು. ದೇಶದ ಪ್ರತಿಯೊಂದು ಆಗುಹೋಗುಗಳ ಕುರಿತು ಜ್ಞಾನ ಹೊಂದಿರಬೇಕು. ಈ ಮೂಲಕ ಯಶಸ್ವಿ ನಾಯಕಿಯಾಗಿ ಬೆಳೆಯಬಹುದು. ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಕೊಳ್ಳಬೇಕು. ನಿಮ್ಮ ಕಾರ್ಯಶೈಲಿ, ಸಾರ್ವಜನಿಕರ ಕುರಿತಾದ ನಿಮ್ಮ ಅಭಿಪ್ರಾಯಗಳು ನಿಮ್ಮ ಪ್ರದೇಶದಲ್ಲಿ ಜನತೆಗೆ ಮನದಟ್ಟಾದರೆ ನೀವು ಉತ್ತಮ ನಾಯಕಿಯಾಗಿ ಬಹುದಿನ ಉಳಿಯಬಲ್ಲಿರಿ ಎಂದು ಮೋದಿ ಮಹಿಳಾ ಸದಸ್ಯರಿಗೆ ಕಿವಿ ಮಾತು ಹೇಳಿದರು.

Write A Comment