ಮನೋರಂಜನೆ

ದೇಶದಲ್ಲಿ ಅಸಹಹಿಷ್ಣುತೆ ಬೀಜ ಬಿತ್ತುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಳ್ಳಲಿ: ಅಮೀರ್ ಖಾನ್

Pinterest LinkedIn Tumblr

Ameer Khan

ನವದೆಹಲಿ: ಭಾರತ ತುಂಬಾ ಸಹಿಷ್ಣು ದೇಶ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಅಸಹಹಿಷ್ಣುತೆ ಬೀಜ ಬಿತ್ತುತ್ತಿದ್ದಾರೆ. ಅಂಥವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಟ ಅಮೀರ್ ಖಾನ್ ಹೇಳಿದ್ದಾರೆ.

ಅಸಹಿಷ್ಣುತೆ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿ ಇನ್‌ಕ್ರೆಡಿಬಲ್ ಇಂಡಿಯಾದಿಂದ ಹೊರ ಬಿದ್ದಿರುವ ಬಾಲಿವುಡ್‌ ನಟ ಮಿಸ್ಟರ್‌ ಪರ್ಫೆಕ್ಟನಿಸ್ಟ್ ಅಮೀರ್ ಖಾನ್ ಮತ್ತೆ ತಮ್ಮ ಮಾತನ್ನು ಬದಲಾಯಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ನಟ ಆಮಿರ್ ಖಾನ್ ಇದೀಗ ಭಾರತವು ಒಂದು ಸಹಿಷ್ಣು ದೇಶ. ಆದರೆ ಕೆಲವರು ದೇಶದಲ್ಲಿ ದ್ವೇಷ ಹಬ್ಬಿಸುತ್ತಿದ್ದು ಅಂತವರ ವಿರುದ್ಧ ಪ್ರಧಾನಿ ಮೋದಿಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಮೋದಿ ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ ಅಮೀರ್.

ಅತಿಥಿ ದೇವೋಭವ ಪ್ರಚಾರ ರಾಯಭಾರಿಯಿಂದ ಕೇಂದ್ರ ಸರ್ಕಾರ ತನ್ನನ್ನು ಕೈಬಿಟ್ಟಿದ್ದರೂ, ತಾನು ಭಾರತದ ಪ್ರಚಾರ ರಾಯಭಾರಿಯಾಗಿ ಮುಂದುವರಿಯಲು ಇಚ್ಛಿಸುತ್ತೇನೆ ಎಂದಿದ್ದಾರೆ. ಭಾರತವು ಬ್ರಾಂಡ್ ಅಲ್ಲ. ಅದು ಯಾವಾಗಲೂ ನನ್ನ ತಾಯಿಯಿದ್ದಂತೆ ಎಂದು ಹೇಳಿದ್ದಾರೆ.

Write A Comment