ಮನೋರಂಜನೆ

ಧರ್ಮಶಾಲಾಗೆ ಪಾಕ್ ತಂಡ ಬಂದರೆ ಪಿಚ್ ನಾಶ..! ಕ್ರೀಡಾ೦ಗಣದ ಪಿಚ್ ಅಗೆಯುತ್ತೇವೆ ಎ೦ದು ಬೆದರಿಕೆ ಹಾಕಿದ ಭಾರತೀಯ ಭಯೋತ್ಪಾದನೆ ನಿಗ್ರಹ ವೇದಿಕೆ

Pinterest LinkedIn Tumblr

Pakistan vs India

ಧಮ೯ಶಾಲಾ: ಧರ್ಮಶಾಲಾದಲ್ಲಿ ಪಾಕಿಸ್ತಾನ-ಭಾರತ ತಂಡಗಳ ನಡುವಿನ ಪಂದ್ಯಕ್ಕೆ ಅವಕಾಶ ನೀಡಿದರೆ ಧರ್ಮಶಾಲಾ ಕ್ರೀಡಾ೦ಗಣದ ಪಿಚ್ ಅನ್ನು ನಾಶಪಡಿಸುತ್ತೇವೆ ಎ೦ದು ಭಾರತೀಯ ಭಯೋತ್ಪಾದನೆ ನಿಗ್ರಹ ವೇದಿಕೆ ಬೆದರಿಕೆ ಹಾಕಿದೆ.

ಐಸಿಸಿ ಟಿ20 ವಿಶ್ವಕಪ್ ನಿಮಿತ್ತ ಇದೇ ಮಾರ್ಚ್ 19ರಂದು ಧರ್ಮಶಾಲಾದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಿಗದಿಯಾಗಿದ್ದು, ಹಿಮಾಚಲ ಪ್ರದೇಶ ಸರ್ಕಾರ ಪಂದ್ಯಕ್ಕೆ ಭದ್ರತೆಯನ್ನು ನಿರಾಕರಿಸಿದ ಬಳಿಕ ಭದ್ರತೆಯ ಭೀತಿ ಶುರುವಾಗಿತ್ತು. ಆದರೆ ಬಿಸಿಸಿಐ ಮತ್ತು ಕೇಂದ್ರ ಸರ್ಕಾರ ಭದ್ರತೆಯ ಆಶ್ವಾಸನೆ ನೀಡಿದ ಬಳಿಕ ಈ ವಿವಾದ ತಣ್ಣಗಾಗಿತ್ತಾದರೂ, ಇದೀಗ ಭಾರತೀಯ ಭಯೋತ್ಪಾದನಾ ನಿಗ್ರಹ ವೇದಿಕೆ ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆ ಹಾಕಿದೆ.

ಯಾವುದೇ ಕಾರಣಕ್ಕೂ ಧರ್ಮಶಾಲಾದಲ್ಲಿ ಪಂದ್ಯ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿರುವ ಭಯೋತ್ಪಾದನೆ ನಿಗ್ರಹ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ವೀರೇ೦ದರ್ ಶಾ೦ಡಿಲ್ಯಾ, “ಪ೦ದ್ಯದ ವೇಳೆ ಪಾಕಿಸ್ತಾನದ ಭಯೋತ್ಪಾದರು ಧರ್ಮಶಾಲಾಕ್ಕೆ ಬರುವ ಅಪಾಯವಿದೆ. ಹೀಗಾಗಿ ಹಿಮಾಚಲ ಪ್ರದೇಶ ಸರ್ಕಾರ ಪ೦ದ್ಯಕ್ಕೆ ಅವಕಾಶ ನೀಡಿದರೆ, ಅದು ಪಠಾಣ್‍ಕೋಟ್‍ನಲ್ಲಿ ಹುತಾತ್ಮರಾದ ಸೈನಿಕರಿಗೆ ಅಗೌರವ ತೋರಿಸಿದ೦ತಾಗುತ್ತದೆ’ ಎ೦ದು ಹೇಳಿದ್ದಾರೆ.

ಅಲ್ಲದೆ ಈ ಸ೦ಬ೦ಧ ಈಗಾಗಲೆ ಪ್ರಧಾನಿ ನರೇ೦ದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ ಸಿ೦ಗ್‍ಗೆ ಪತ್ರ ಬರೆದಿರುವುದಾಗಿ ತಿಳಿಸಿರುವ ಅವರು, ಹಿಮಾಚಲ ಪ್ರದೇಶ ಮುಖ್ಯಮ೦ತ್ರಿ ವೀರಭದ್ರ ಸಿ೦ಗ್ ಮತ್ತು ವಿರೋಧಪಕ್ಷ ನಾಯಕ ಪಿಕೆ ಧುಮಲ್‍ರನ್ನೂ ಭೇಟಿಯಾಗಿ ಬೇಡಿಕೆ ಮ೦ಡಿಸಿದ್ದಾರೆ. ಧಮ೯ಶಾಲಾದಲ್ಲಿ ಪ೦ದ್ಯವನ್ನು ವಿರೋಧಿಸಿ ಮು೦ಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎ೦ದೂ ಶಾ೦ಡಿಲ್ಯಾ ತಿಳಿಸಿದ್ದಾರೆ.

ಇನ್ನು ಧರ್ಮಶಾಲಾ ಪಂದ್ಯಕ್ಕೆ ಭದ್ರತಾ ಭೀತಿ ಇರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಭಾರತದ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ತ೦ಡವೊ೦ದನ್ನು ಕಳುಹಿಸಿ ಕೊಡುತ್ತಿದ್ದು, ಈ ತ೦ಡ ವರದಿ ಮ೦ಡಿಸಿದ ಬಳಿಕ ಪಾಕ್ ತ೦ಡ ಟಿ20 ವಿಶ್ವಕಪ್‍ಗೆ ಆಗಮಿಸುವ ಬಗ್ಗೆ ಸ್ಪಷ್ಟ ಚಿತ್ರಣ ಮೂಡಲಿದೆ.

ಮಸೂದ್ ತಲೆ ತನ್ನಿ ಪಾಕ್ ವಿರುದ್ಧ ಪಂದ್ಯ ನಡೆಸಿ!
ಧರ್ಮಶಾಲಾ ಪಂದ್ಯವನ್ನು ಇದೀಗ ಮತ್ತೊಂದು ಸಂಘಟನೆ ವಿರೋಧಿಸಿದ್ದು, ಬಿಸಿಸಿಐ ನಿಜಕ್ಕೂ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿಸಲೇಬೇಕು ಎಂದಿದ್ದರೆ, ಮೊದಲು ಉಗ್ರ ಮಸೂದ್ ಅಜರ್ ನ ತಲೆ ಕಡಿದು ಭಾರತಕ್ಕೆ ತರಲಿ ಎಂದು ಹಿಮಾಚಲ ಪ್ರದೇಶದ ಮಾಜಿ ಸೈನಿಕರ ಸ೦ಸ್ಥೆಯ (ಐಇಎಲ್) ಅಧ್ಯಕ್ಷ ಮೇಜರ್ ವಿಜಯ್ ಸಿ೦ಗ್ ಮ೦ಕೋಟಿಯಾ ಆಗ್ರಹಿಸಿದ್ದಾರೆ. ಇದೇ ವೇಳೆ ಪ೦ದ್ಯ ವಿರೋಧಿಸುವ ಸಲುವಾಗಿ “ಆಪರೇಷನ್ ಬಲಿದಾನ್’ ಅಭಿಯಾನ ಆರ೦ಭಿಸಲಾಗುವುದು ಎ೦ದೂ ಅವರು ತಿಳಿಸಿದ್ದಾರೆ.

Write A Comment