ರಾಷ್ಟ್ರೀಯ

ಬದಲಾದ ಮೋದಿ ಕೇಶ ವಿನ್ಯಾಸ: ಮೋದಿ ಅವರ ಕೇಶ ವಿನ್ಯಾಸಕ ಯಾರು? ದಿಗ್ವಿಜಯ್‌ ಸಿಂಗ್‌ ಪ್ರಶ್ನೆ

Pinterest LinkedIn Tumblr

modiwebನವದೆಹಲಿ: ಅರ್ಧ ತೋಳಿನ ಕುರ್ತಾ ಸೇರಿದಂತೆ ಹಲವು ಬಣ್ಣ, ವಿನ್ಯಾಸಗಳ ಉಡುಪು ತೊಡುವ ಮೂಲಕ ಆಕರ್ಷಕ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ, ಗುರುವಾರದಿಂದ ತಮ್ಮ ಕೇಶ ವಿನ್ಯಾಸವನ್ನೂ ಬದಲಿಸಿಕೊಂಡಿದ್ದಾರೆ.

ಮೋದಿ ಅವರು ಕೇಶ ವಿನ್ಯಾಸ ಬದಲಿಸಿಕೊಂಡದ್ದನ್ನು ಅನೇಕರು ಅಷ್ಟಾಗಿ ಗಮನಿಸಿರಲಿಲ್ಲ. ಗುರುವಾರ ಲೋಕಸಭೆಯಲ್ಲಿ ಅವರು ಹಾಸ್ಯ, ಟೀಕೆ, ವ್ಯಂಗ್ಯ ಮಿಶ್ರಿತ ರೀತಿಯಲ್ಲಿ ವಿರೋಧ ಪಕ್ಷಗಳಿಗೆ ಮಾತಿನ ಚಾಟಿ ಬೀಸಿದ್ದರು.

ಈ ನಡುವೆ ಕಾಂಗ್ರೆಸ್‌ನ ಹಿರಿಯ ಮುಖಂಡ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು ಮೋದಿ ಅವರ ಕೇಶ ವಿನ್ಯಾಸ ಬದಲಾಗಿರುವುದನ್ನು ಗಮನಿಸಿದರು. ಅಷ್ಟೇ ಅಲ್ಲ, ಶುಕ್ರವಾರ ಅವರು, ‘ಮೋದಿ ತಮ್ಮ ಹೇರ್‌ಸ್ಟೈಲ್‌ ಬದಲಿಸಿಕೊಂಡಿದ್ದಾರೆ, ಈಗ ಜನರು ಅವರ ಕೇಶವಿನ್ಯಾಸಕ ಯಾರು ಎಂದು ಕೇಳುತ್ತಿದ್ದಾರೆ? ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ನೂರಾರು ಪ್ರತಿ ಟ್ವೀಟ್‌ಗಳು ಬಂದಿವೆ. ಕೆಲವರು ದಿಗ್ವಿಜಯ್‌ ಸಿಂಗ್‌ ಅವರದು ಸೂಕ್ಷ್ಮ ಗಮನಿಸುವಿಕೆ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಕಾಂಗ್ರೆಸ್‌ ಈ ಮಟ್ಟಕ್ಕೆ ಇಳಿದಿದೆಯಾ? ಲಿಲಿತ್‌ ಮೋದಿ, ದಲಿತ್‌ ಮೋದಿ ಎಲ್ಲ ಆಯಿತು. ಈಗ ಅಂತಿಮವಾಗಿ ಮೋದಿ ತಲೆಗೂ (ಕೂದಲಿಗೂ) ಕೈ ಹಾಕಿದೆ ಎಂದು ವ್ಯಂಗ್ಯವಾಡಿದ್ದಾರೆ.

Write A Comment