ದೆಹಲಿ: ಇಲ್ಲಿನ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್.ಎ.ಆರ್ ಗಿಲಾನಿ ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್ 16ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿರುವ ಗಿಲಾನಿಯವರನ್ನು 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಭದ್ರತೆಯ ಕಾರಣಗಳಿಂದ ವಿಚಾರಣೆ ನಡೆಸಿದ ಜಾಗವನ್ನು ಗುಪ್ತವಾಗಿ ಇಡಲಾಗಿದೆ.
2013ರ ಫೆಬ್ರವರಿಯಂದು ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದಕ್ಕೆ ತಪ್ಪಿತಸ್ಥನೆಂದು ಗಲ್ಲಿಗೇರಿಸಿದ ಅಫ್ಜಲ್ ಗುರು ನೆನಪಿನಲ್ಲಿ, ಫೆಬ್ರವರಿ 10ರಂದು ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಆರೋಪಿಸಿ ಕಾಶ್ಮೀರಿ ಮೂಲದ ಈ ಮಾಜಿ ಪ್ರಾಧ್ಯಾಪಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.