ರಾಷ್ಟ್ರೀಯ

ಕೆಲಸ ಹುಡುಕುತ್ತಿರುವ ಐಐಟಿ ಪದವೀಧರ ಫ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟ!

Pinterest LinkedIn Tumblr

aakash-neeraj-mittal-iit-flipkart

ನವದೆಹಲಿ: ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ವಸ್ತುಗಳು ಮಾತ್ರವಲ್ಲದೆ ವ್ಯಕ್ತಿಗಳೂ ಮಾರಾಟಕ್ಕಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಸೊಸೆಯೊಬ್ಬಳು ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಅತ್ತೆಯನ್ನು ಮಾರಾಟಕ್ಕಿಟ್ಟಿದ್ದರೆ, ಇಲ್ಲಿ ಕೆಲಸಕ್ಕಾಗಿ ಹುಡುಕುತ್ತಿರುವ ಖರಗ್ ಪುರ ಐಐಟಿ ಪದವೀಧರನೊಬ್ಬ ಫ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟಿದ್ದಾನೆ!.

ಉತ್ಪನ್ನ ನಿರ್ವಹಣೆ ( ಪ್ರಾಡಕ್ಟ್ ಮ್ಯಾನೇಜ್ ಮೆಂಟ್) ಕೆಲಸ ಹುಡುಕುತ್ತಿದ್ದ ಯುವಕ ಆಕಾಶ್ ನೀರಜ್ ಮಿತ್ತಲ್, ಇ-ಕಾಮರ್ಸ್ ವೆಬ್ ಸೈಟ್ ಪ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟಿದ್ದು 27,60,200 ರೂ ಗಳನ್ನು ಕನಿಷ್ಠ ದರವನ್ನಾಗಿ ನಿಗದಿಪಡಿಸಿದ್ದಾನೆ.

ಐಐಟಿ ಪದವಿಧರ ತನ್ನನ್ನೇ ತಾನು ಮಾರಾಟಕ್ಕಿಟ್ಟಿರುವ ಬಗ್ಗೆ ಆತನ ಕಿರಿಯ ವಿದ್ಯಾರ್ಥಿ ಹರ್ಷ ಬಜಾಜ್ ಕೋರಾದಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿದ್ದು, ನನ್ನ ಹಿರಿಯ ವಿದ್ಯಾರ್ಥಿ ವಿಭಿನ್ನ ರೀತಿಯಲ್ಲಿ ಕೆಲಸ ಹುಡುಕಿದ್ದು ವೈಯಕ್ತಿಕ ವಿವರಗಳನ್ನು ನೀಡಿದ್ದಾರೆ ಎಂದು ಬರೆದಿದ್ದಾನೆ.

ದೇಶದಲ್ಲಿರುವ ಅತ್ಯುತ್ತಮ ವಿದ್ಯಾರ್ಥಿಗಳ ನಡುವೆ ಸೆಣೆಸಿ, ಕೆಲಸಪಡೆಯುವುದು ಎಷ್ಟು ಕಷ್ಟದ ಕೆಲಸ, ಅದಕ್ಕಾಗಿ ವಿಭಿನ್ನ ರೀತಿಯ ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ ಎಂದು ನೀರಜ್ ಮಿತ್ತಲ್ ಫ್ಲಿಪ್ ಕಾರ್ಟ್ ಎಪಿಎಂ ಪ್ರೊಫೈಲ್ ನಲ್ಲಿ ಬರೆದಿದ್ದಾನೆ.

Write A Comment