ರಾಷ್ಟ್ರೀಯ

2016ರಲ್ಲಿ 65 ಪಾಕಿಸ್ತಾನಿಗಳಿಗೆ ಭಾರತದ ಪೌರತ್ವ

Pinterest LinkedIn Tumblr

india_pak

ನವದೆಹಲಿ: 2016 ಆರಂಭವಾಗಿ ಎರಡು ತಿಂಗಳಲ್ಲೇ ಪಾಕಿಸ್ತಾನದ 65 ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ.

2016ರಲ್ಲಿ ಗಾಯಕ ಅದ್ನಾನ್ ಸಮಿ ಸೇರಿದಂತೆ 65 ಪಾಕಿಸ್ತಾನ ಪ್ರಜೆಗಳಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

2015ರಲ್ಲಿ 263 ಪಾಕಿಸ್ತಾನಿಗಳಿಗೆ ಹಾಗೂ ವಿವಿಧ ದೇಶಗಳ 344 ಜನರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

2014ರಲ್ಲಿ 267 ಪಾಕಿಸ್ತಾನಿಗಳಿಗೆ ಹಾಗೂ ವಿವಿಧ ದೇಶಗಳ 344 ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದ ಅವರು, ಗಾಯಕಿ ಸಮಿ ಅವರಿಗೆ 2016 ಜನವರಿ 1ರಂದು ಭಾರತದ ಪೌರತ್ವ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Write A Comment