ಅಂತರಾಷ್ಟ್ರೀಯ

ಏಷ್ಯಾಕಪ್ ಪಂದ್ಯ ವೀಕ್ಷಿಸಲು ಪಾಕ್ ಅಭಿಮಾನಿಗೆ ಧೋನಿ ಟಿಕೆಟ್ !

Pinterest LinkedIn Tumblr

bashir3

ಢಾಕಾ: ಅರ್ಧ ಪಾಕಿಸ್ತಾನ ಬಾವುಟ ಅರ್ಧ ಭಾರತದ ಬಾವುಟ ಹೊಂದಿರುವ ಬಟ್ಟೆ ಧರಿಸಿ, ಉದ್ದನೆಯ ದಾಡಿಯೊಂದಿಗೆ ಪೋರ್, ಸಿಕ್ಸ್ ಭಾರಿಸಿದಾಗ ಉಭಯ ತಂಡಕ್ಕೂ ಚಿಯರಪ್ ಮಾಡುವ 62 ವರ್ಷದ ಪಾಕಿಸ್ತಾನದ ಚಾಚಾನನ್ನು ಕ್ರೀಡಾಂಗಣದಲ್ಲಿ ನೋಡಿರಬಹುದು. ಅವರ ಪಂದ್ಯ ವೀಕ್ಷಣೆಗೆ ಟಿಕೆಟ್ ನೀಡುವವರು ಯಾರು ಗೊತ್ತಾ ? ಮತ್ಯಾರು ಅಲ್ಲ, ಭಾರತದ ಏಕದಿನ ಹಾಗೂ ಟಿ20 ಪಂದ್ಯದ ನಾಯಕ ಮಹೇಂದ್ರಸಿಂಗ್ ಧೋನಿ.

bashir31

ಧೋನಿ ಅಪ್ಪಟ ಅಭಿಮಾನಿ ಆಗಿರುವ 62ರ ಹರಯದ ಬಷಿರ್ ಚಾಚಾ ಸದಾ ಧೋನಿ ಶ್ರೇಯಸ್ಸನ್ನು ಬಯಸುತ್ತಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ಸಿಗದೆ ನಿರಾಶರಾದಾಗ ಟಿಕೆಟ್ ನೀಡಿದ್ದು ಧೋನಿ. ಕಳೆದ ಶನಿವಾರ ನಡೆದ ಇಂಡೋ-ಪಾಕ್ ಪಂದ್ಯದಲ್ಲಿ ಕೂಡ ಕಾಣಿಸಿಕೊಂಡ ಬಷಿರ್, ಪಾಕ್ ಹಾಗೂ ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಆಟಕ್ಕೆ ದೇಶ, ಧರ್ಮದ ಹಂಗಿಲ್ಲ ಎಂದು ಬಷಿರ್ ಚಾಚಾ ಸಾಬೀತು ಪಡಿಸಿದರು.

Write A Comment